ಬಿಹಾರದ ಮುಜಫರ್ ಪುರದಲ್ಲಿ ಶಾಲೆಯೊಂದರ ಪ್ರಾಂಶುಪಾಲ ಗಣರಾಜ್ಯೋತ್ಸವದಂದು ಮದ್ಯದ ನಶೆಯಲ್ಲಿ ಶಾಲೆಗೆ ಬಂದಿದ್ದಾರೆ. ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಇರುವ ಹೊರತಾಗಿಯೂ ಈ ಘಟನೆ ನಡೆದಿದೆ.
ಮುಜಫರ್ ಪುರದ ಮೀನಾಪುರ ಬ್ಲಾಕ್‌ನಲ್ಲಿರುವ ಸರ್ಕಾರಿ ಮಿಡಲ್ ಶಾಲೆ ಧರ್ಮಪುರ ಈಸ್ಟ್‌ನ ಪ್ರಾಂಶುಪಾಲ ಸಂಜಯ್ ಕುಮಾರ್ ಸಿಂಗ್, ಗಣರಾಜ್ಯೋತ್ಸವದ ಸಮಾರಂಭದ ಸಂದರ್ಭದಲ್ಲಿ ಶಾಲೆಗೆ ನಶೆಯಲ್ಲಿ ಬಂದಿದ್ದರು.
ಜನವರಿ 26 ರಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಒಂದು ವೀಡಿಯೊದಲ್ಲಿ, ಸಿಂಗ್ ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ಘಟನೆಯು ಸಾರ್ವಜನಿಕರಲ್ಲಿ ಆಕ್ರೋಶವನ್ನು ಉಂಟುಮಾಡಿದ್ದು, ಸ್ಥಳೀಯ ಪೊಲೀಸರು ಅವರನ್ನು ಬಂಧಿಸಿದ್ದಾರೆ.
बिहार में गणतंत्र दिवस पर नशे में धुत्त होकर स्कूल पहुंच गए हेडमास्टर
मामला मुजफ्फरपुर के रामपुर हरि थाना क्षेत्र का pic.twitter.com/HptCwKaVYW
— Priya singh (@priyarajputlive) January 27, 2025