
ಮಹಿಳೆ ಮತ್ತು ಹುಡುಗಿಯರು ಸೇರಿದಂತೆ ಆರಕ್ಕೂ ಹೆಚ್ಚು ಜನರನ್ನು ಒಂದು ಗಂಟೆಯೊಳಗೆ ಕಚ್ಚಿ ಗಾಯಗೊಳಿಸಿದ್ದಾನೆ. ಆತ ಕಚ್ಚುತ್ತಾ ದಾಳಿ ನಡೆಸುತ್ತಿದ್ದಂತೆ ಜನರು ಉದ್ರಿಕ್ತರಾಗಿ ಓಡುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದರಿಂದ ಆತಂಕಗೊಂಡ ದಾರಿಹೋಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಆಗಮಿಸುವ ಮೊದಲು ಸ್ಥಳೀಯರು ಹಗ್ಗದಿಂದ ಆತನನ್ನು ತಡೆದು ಹಿಡಿಯುವಲ್ಲಿ ಯಶಸ್ವಿಯಾದರು. ಸದ್ಯ ಪೊಲೀಸರು ಆ ವ್ಯಕ್ತಿಯ ಕುಟುಂಬದ ಪತ್ತೆಗೆ ಯತ್ನಿಸುತ್ತಿದ್ದಾರೆ. ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಹುದು ಎಂದು ಹೇಳಲಾಗಿದ್ದು ಹೆಚ್ಚಿನ ತನಿಖೆಗಳು ನಡೆಯುತ್ತಿವೆ.