ಮಹಿಳೆಯರು ಪುರುಷರ ಸಮಾನವಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ಇನ್ನೂ ನಮ್ಮ ದೇಶದಲ್ಲಿ ಅನೇಕ ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಮಹಿಳೆಯರು ಹಣಕ್ಕಾಗಿ ಪತಿ, ಮಕ್ಕಳ ಮುಂದೆ ಕೈಚಾಚಬೇಕಾಗಿದೆ. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಬಹಳ ಮುಖ್ಯ.
ಆರ್ಥಿಕ ಸ್ವಾವಲಂಬನೆಯು ವಿಭಿನ್ನ ಮಹಿಳೆಯರಿಗೆ ವಿಭಿನ್ನವಾಗಿ ಹೇಳಬೇಕಾಗುತ್ತದೆ. ಆರ್ಥಿಕ ಸ್ವಾವಲಂಬನೆ, ಮಹಿಳೆಗೆ ಹೆಚ್ಚು ಸುರಕ್ಷಿತ ಮತ್ತು ಗೌರವವನ್ನು ನೀಡುತ್ತದೆ. ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ, ಅದು ಆಕೆ ಕುಟುಂಬಕ್ಕೂ ನೆರವಾಗಲಿದೆ.
ಆರ್ಥಿಕ ಸ್ವಾವಲಂಬಿ ಎಂಬುದು ಕೆಲವರಿಗೆ ದೊಡ್ಡ ಶಬ್ಧ. ಎಲ್ಲಿ ಹಣ ಹೂಡಿಕೆ ಮಾಡಬೇಕು ? ಹೇಗೆ ಉಳಿತಾಯ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಮಹಿಳೆಯರು ಉಳಿತಾಯದ ಗುಣ ಹೊಂದಿರುತ್ತಾರೆ. ಆದ್ರೆ ಉಳಿತಾಯ ಮಾಡಿದ ಹಣದಿಂದ ಬಡ್ಡಿ ಪಡೆಯುವ ವಿಧಾನ ಅವರಿಗೆ ತಿಳಿದಿರುವುದಿಲ್ಲ.
ಮಹಿಳೆಯರ ಉಳಿತಾಯದ ಮೊದಲ ಆಯ್ಕೆ ಮ್ಯೂಚುಯಲ್ ಫಂಡ್ ಆಗಿರಬೇಕು. ಇದು ಸುರಕ್ಷಿತ ಮತ್ತು ಹೆಚ್ಚಿನ ಲಾಭ ನೀಡುತ್ತದೆ. ಎಸ್ಐಪಿ ಮೂಲಕ ದೀರ್ಘಾವದಿ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಕಡಿಮೆ ಆದಾಯವಿರಲಿ ಇಲ್ಲ ಆದಾಯ ಇಲ್ಲದೆ ಇರಲಿ, ಪ್ರತಿ ತಿಂಗಳು 500 ರೂಪಾಯಿ ಎಸ್‌ಐಪಿ ಪ್ರಾರಂಭಿಸಬಹುದು. ಇದರಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಬಹುದು. ಮ್ಯೂಚುಯಲ್ ಫಂಡ್ ಬಗ್ಗೆ ಪ್ರತಿ ಮಹಿಳೆ ತಿಳಿದಿರಬೇಕು.
ಮೂರು ವಿಧದ ಮ್ಯೂಚುಯಲ್ ಫಂಡ್‌ಗಳಿವೆ. ಇಕ್ವಿಟಿ ಬಾಂಡ್ ಮತ್ತು ಹೈಬ್ರಿಡ್ ಫಂಡ್. ಇದ್ರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಹೂಡಿಕೆ ಮಾಡಬೇಕು. ತಿಂಗಳಿಗೆ ಮಾಡುವ 500 ರೂಪಾಯಿ ಉಳಿತಾಯ ಮುಂದೊಂದು ದಿನ 50 ಸಾವಿರವಾಗಲಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.