ಮೂವತ್ತರ ಗಡಿ ದಾಟಿದ ಮೇಲೆ ನಿವೃತ್ತಿ ಬಳಿಕ ಜೀವನದ ಮೇಲೆ ಆಲೋಚನೆಗಳು ಆರಂಭವಾಗುವುದು ಸಹಜ. ಹೀಗೊಂದು ಆಲೋಚನೆ ಬರುತ್ತಲೇ ಸೂಕ್ತ ಹೂಡಿಕೆಗಳ ಆಯ್ಕೆಗಳನ್ನು ಎಡತಾಕುತ್ತೇವೆ.
ಸದ್ಯದ ಮಟ್ಟಿಗೆ ಮಾಸಿಕ ಖರ್ಚು ವೆಚ್ಚ 50,000 ರೂಪಾಯಿಗಳಷ್ಟಿದ್ದರೆ ಮೂವತ್ತು ವರ್ಷಗಳ ಬಳಿಕ ಅಷ್ಟೇ ಖರ್ಚು ವೆಚ್ಚ 2.16 ಲಕ್ಷ ರೂಪಾಯಿ ತಲುಪುತ್ತದೆ.
ಕೊರೊನಾದಲ್ಲಿ ತಂದೆ-ತಾಯಿ ಕಳೆದುಕೊಂಡ ವಿದ್ಯಾರ್ಥಿನಿ ಮಾಡಿದ್ದಾಳೆ ಈ ಸಾಧನೆ
ಹೀಗಾಗಿ, ನಿಮ್ಮ ಸದ್ಯದ ಜೀವನಶೈಲಿಯನ್ನು 30 ವರ್ಷಗಳ ಬಳಿಕವೂ ಮುಂದುವರೆಸಲು ಇಚ್ಛಿಸುವುದಾದರೆ, ಪ್ರತಿ ತಿಂಗಳು 20,000 ರೂಪಾಯಿಯಂತೆ ಮುಂದಿನ 20 ವರ್ಷಗಳ ಮಟ್ಟಿಗೆ ಹೂಡಿಕೆ ಮಾಡುತ್ತಾ ಹೋಗಬೇಕಾಗುತ್ತದೆ. ನಿಮ್ಮ ಎಸ್‌ಐಪಿ ಮೇಲೆ ವಾರ್ಷಿಕ 12% ಬಡ್ಡಿ ದರ ಕೂಡುತ್ತಾ ಹೋದಲ್ಲಿ ಆ ಮೊತ್ತವು ಮುಂದಿನ 20 ವರ್ಷಗಳಲ್ಲಿ 1,00,91,520 ರೂಪಾಯಿಗಳಾಗುತ್ತದೆ. 30 ವರ್ಷಗಳಲ್ಲಿ ಇದೇ ದುಡ್ಡು 3,13,42,729 ರೂಪಾಯಿಗೆ ಬೆಳೆಯುತ್ತದೆ.
ನೀವೀಗ 30 ವರ್ಷ ವಯಸ್ಸಿನವರಾಗಿದ್ದು, ಹೀಗೆ ಮಾಡುತ್ತಾ ಸಾಗಿದಲ್ಲಿ 60 ವರ್ಷ ವಯಸ್ಸಾದ ಬಳಿಕ ನಿಮಗೆ ಮಾಸಿಕ 2.27 ಲಕ್ಷ ರೂಪಾಯಿಗಳಷ್ಟು ರಿಟರ್ನ್ಸ್‌ಅನ್ನು ನೀವು ಪಡೆಯಬಹದಾಗಿದೆ.
ಹೆಚ್ಚಿನ ವಿವರಗಳಿಗೆ ಈ ಪಟ್ಟಿಯನ್ನೊಮ್ಮೆ ಪರಿಶೀಲಿಸಿ.