ನವದೆಹಲಿ: ಮುತ್ತೂಟ್ ಗ್ರೂಪ್ ಅಧ್ಯಕ್ಷ ಎಂ.ಜಿ. ಜಾರ್ಜ್ ಮುತ್ತೂಟ್ ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮುತ್ತೂಟ್ ಗ್ರೂಪ್ ನ ಮುತ್ತೂಟ್ ಫೈನಾನ್ಸ್ ಗೋಲ್ಡ್ ಲೋನ್ ನ ಪ್ರಮುಖ ಫೈನಾನ್ಸ್ ಕಂಪನಿಯಾಗಿದೆ. ಜಾರ್ಜ್ ಅವರು ಮುತ್ತೂಟ್ ಕಂಪನಿಯ ಅಧ್ಯಕ್ಷರಾದ ಕುಟುಂಬದ ಮೂರನೇ ವ್ಯಕ್ತಿಯಾಗಿದ್ದಾರೆ. ಮೆಟ್ಟಿಲುಗಳಿಂದ ಬಿದ್ದಿದ್ದ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ದೇಶದ 26 ನೇ ಶ್ರೀಮಂತ ವ್ಯಕ್ತಿ ಮತ್ತು ಮಲಯಾಳಿಗಳಲ್ಲಿ ನಂಬರ್ ಒನ್ ಶ್ರೀಮಂತ ವ್ಯಕ್ತಿ ಎಂದು ಕಳೆದ ವರ್ಷ ಫೋರ್ಬ್ಸ್ ಏಷ್ಯಾ ಮ್ಯಾಗ್ ಜಿನ್ ಘೋಷಿಸಿತ್ತು. ಮುತ್ತೂಟ್ ಫೈನಾನ್ಸ್ ಎಂ.ಜಿ. ಜಾರ್ಜ್ ಅವರ ನೇತೃತ್ವದಲ್ಲಿ ದೇಶದ ಅತಿದೊಡ್ಡ ಚಿನ್ನದ ಸಾಲ ಫೈನಾನ್ಸ್ ಕಂಪನಿಯಾಗಿ ಬೆಳೆದಿದೆ. ಮುತ್ತೂಟ್ ಫೈನಾನ್ಸ್ ಬ್ಯಾಂಕೇತರ ಹಣಕಾಸು ಸಂಸ್ಥೆ 1000 ಕೋಟಿ ನಿವ್ವಳ ಆದಾಯ ಗಳಿಸಿದ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದೆ. ಮುತ್ತೂಟ್ ಗ್ರೂಪ್ ನ 20 ಸಂಸ್ಥೆಗಳಿದ್ದು, ವಿಶ್ವದಾದ್ಯಂತ ಸುಮಾರು 5500 ಕ್ಕೂ ಶಾಖೆಗಳನ್ನು ಹೊಂದಿದೆ.