ಕೊರೋನಾ 2ನೇ ಅಲೆ ಸ್ವಲ್ಪ ಇಳಿಮುಖವಾದ ಬೆನ್ನಲ್ಲೇ ಸರಕಾರ ನಿಧಾನಕ್ಕೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನುಮತಿ ನೀಡಿದೆ. ಅಲ್ಲದೆ ಕೆಲವೊಂದು ಕಠಿಣ ನಿಬಂಧನೆಗಳನ್ನು ಕೂಡ ವಿಧಿಸಿದೆ.
ಹೀಗಾಗಿ ಜಿಮ್ ಮಾಲೀಕರು ಜನರ ಸುರಕ್ಷತೆಗಾಗಿ ಸರಕಾರ ರೂಪಿಸಿರುವ ನಿಯಮಗಳಿಗನುಸಾರವಾಗಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಸದ್ಯ ಚಂಡೀಗಢ ಲೇಕ್ ಕ್ಲಬ್ ಹೊರಡಿಸಿರುವ ಮಾರ್ಗಸೂಚಿ ಭಾರಿ ವೈರಲ್ ಆಗಿದೆ.
ಹೌದು, ಬೇರೆಲ್ಲಾ ಜಿಮ್ ಮಾಲೀಕರಿಗಿಂತ ಚಂಡೀಗಢ ಲೇಕ್ ಕ್ಲಬ್ ಅವರು ಹೊರಡಿಸಿರುವ ನಿಯಮಗಳು ಇತರರಿಗಿಂತ ವಿಭಿನ್ನವಾಗಿದೆ. ಅದೇನಪ್ಪಾ ಅಂದ್ರೆ ಈ ಜಿಮ್ ಗೆ ಹೋಗಬೇಕೆಂದರೆ ಮೊದಲನೆಯದಾಗಿ ಜಿಮ್ ಸೂಟ್ ಗಳನ್ನು ಧರಿಸಿರಬೇಕು. ಹಾಗೂ ಅನುಮೋದಿತ ಒಳಉಡುಪುಗಳನ್ನು ಮಾತ್ರ ಅನುಮತಿಸಲಾಗುವುದು. ಅದರ ಮಾದರಿಗಳನ್ನು ಕಚೇರಿಯಲ್ಲಿ ಇರಿಸಲಾಗುತ್ತದೆ. ಕೊನೆಯದಾಗಿ ಸದಸ್ಯರು ತಮ್ಮದೇ ಉಡುಪುಗಳನ್ನು ತರಬಹುದು. ಆದರೆ ಅವುಗಳನ್ನು ಅನುಮೋದನೆಗಾಗಿ ಮುದ್ರೆ ಒತ್ತಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.
ಕೇಂದ್ರ ಸರ್ಕಾರ ತರ್ತಿದೆ `ಫಿಟ್ ಇಂಡಿಯಾ ಕ್ವಿಜ್’: ಗೆದ್ದವರಿಗೆ ಸಿಗಲಿದೆ ನಗದು ಬಹುಮಾನ
ಇನ್ನು ಸದಸ್ಯರು ಕೊಳಕು ಹಾಗೂ ದುರ್ವಾಸನೆ ಬೀರುವ ಸಾಕ್ಸ್ ಧರಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಹೇಳಿದೆ. ಅಲ್ಲದೆ ಅನುಮತಿಸಲಾದ ಕೆಟ್ಟ ಪದಗಳ ಪಟ್ಟಿಯನ್ನು ಪಂಜಾಬಿ ಭಾಷೆಯಲ್ಲಿ ಬಳಸಲು ಸದಸ್ಯರಿಗೆ ಅನುಮತಿ ನೀಡಲಾಗುವುದು ಎಂದು ಹೇಳಿದೆ. ಅಲ್ಲದೆ ಶಾರ್ಟ್ಸ್ ಧರಿಸಿದವರು ಬೇರೆಯವರ ಅನಗತ್ಯ ಗಮನ ತಪ್ಪಿಸಲು ಕಾಲುಗಳ ಕೂದಲು ತೆಗೆಯಬೇಕು ಎಂದು ತನ್ನ ನಿಯಮ- ನಿಬಂಧನೆಗಳಲ್ಲಿ ತಿಳಿಸಿದೆ.
ಸದ್ಯ ಇದು ಟ್ವಿಟ್ಟರ್ ನಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ವ್ಯಂಗ್ಯಭರಿತ ಟೀಕೆಗಳನ್ನು ಮಾಡಿದ್ದಾರೆ. ಇನ್ನೂ ಕೆಲವರು ಇದು ನಕಲಿ ಅಂತಾ ಜರೆದಿದ್ದಾರೆ.