alex Certify ‘ರಾಮಮಂದಿರದ ಜಾಗದಲ್ಲಿ ಮುಸ್ಲಿಮರು 500 ವರ್ಷ ನಮಾಜ್ ಮಾಡಿದ್ರು’ : ವಿವಾದದ ಕಿಡಿ ಹೊತ್ತಿಸಿದ ಅಸಾದುದ್ದೀನ್ ಒವೈಸಿ |Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಾಮಮಂದಿರದ ಜಾಗದಲ್ಲಿ ಮುಸ್ಲಿಮರು 500 ವರ್ಷ ನಮಾಜ್ ಮಾಡಿದ್ರು’ : ವಿವಾದದ ಕಿಡಿ ಹೊತ್ತಿಸಿದ ಅಸಾದುದ್ದೀನ್ ಒವೈಸಿ |Video

ರಾಮಮಂದಿರದ ಜಾಗದಲ್ಲಿ ಮುಸ್ಲಿಮರು 500 ವರ್ಷ ನಮಾಜ್ ಮಾಡಿದ್ರು ಎಂದು ಅಸಾದುದ್ದೀನ್ ಒವೈಸಿ ವಿವಾದದ ಕಿಡಿ ಹೊತ್ತಿಸಿದ್ದಾರೆ.ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಓವೈಸಿ ಈ ಹೇಳಿಕೆ ನೀಡಿದ್ದಾರೆ.

ರಾಮ ಮಂದಿರ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಬಿಜೆಪಿ ಮತ್ತು ಎಎಪಿ ವಿರುದ್ಧ ವಾಗ್ಧಾಳಿ ನಡೆಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಅವರು ಮುಸ್ಲಿಂ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ ಮತ್ತು ಹಿಂದೂ ಬಹುಸಂಖ್ಯಾತರನ್ನು ಓಲೈಸುತ್ತಿದ್ದಾರೆ ಎಂದು ಆರೋಪಿಸಿದರು.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, 1949 ರಲ್ಲಿ ಕಾಂಗ್ರೆಸ್ ನಾಯಕ ಗೋವಿಂದ ವಲ್ಲಭ್ ಪಂತ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಮತ್ತು ಕೆ.ಕೆ.ನಾಯರ್ ಅಯೋಧ್ಯೆಯ ಜಿಲ್ಲಾಧಿಕಾರಿಯಾಗಿದ್ದಾಗ ಹಿಂದೂ ಕಾರ್ಯಕರ್ತರು ಬಾಬರಿ ಮಸೀದಿಯನ್ನು ವ್ಯವಸ್ಥಿತವಾಗಿ ಆಕ್ರಮಿಸುವವರೆಗೂ ಮುಸ್ಲಿಮರು 500 ವರ್ಷಗಳಿಂದ ಬಾಬರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರವು ಮಸೀದಿಯೊಳಗೆ ರಹಸ್ಯವಾಗಿ ಇರಿಸಲಾಗಿದ್ದ ವಿಗ್ರಹಗಳನ್ನು ತೆಗೆದುಹಾಕಲಿಲ್ಲ, ಬದಲಿಗೆ ಮಸೀದಿಗೆ ಬೀಗ ಹಾಕಿ ಹಿಂದೂ ಕಾರ್ಯಕರ್ತರಿಗೆ ಅಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿತು ಎಂದು ಅವರು ಆರೋಪಿಸಿದರು. ರಾಮ ಮಂದಿರ ಆಂದೋಲನವು 1964 ರಲ್ಲಿ ರೂಪುಗೊಂಡ ವಿಶ್ವ ಹಿಂದೂ ಪರಿಷತ್ ನ ಸೃಷ್ಟಿಯಾಗಿದೆ ಮತ್ತು ಮಹಾತ್ಮ ಗಾಂಧಿ ವಿವಾದಿತ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುವ ಬಗ್ಗೆ ಎಂದಿಗೂ ಮಾತನಾಡಲಿಲ್ಲ ಎಂದು ಅವರು ಹೇಳಿದ್ದಾರೆ.

1992 ರಲ್ಲಿ ಬಿಜೆಪಿ ಸಂಘ ಪರಿವಾರ ಸುಪ್ರೀಂಕೋರ್ಟ್ ಮುಂದೆ ಪ್ರಮಾಣ ಮಾಡಿ ಬಾಬ್ರಿ ಮಸೀದಿ ಕೆಡವಿದರು. ವಿಶ್ವ ಹಿಂದೂ ಪರಿಷತ್ ಹುಟ್ಟಿಕೊಂಡಾಗ ರಾಮಮಂದಿರ ಇರಲಿಲ್ಲ. ಮಹಾತ್ಮಾ ಗಾಂಧಿಯವರು ಈ ವಿಚಾರದಲ್ಲಿ ಏನಾದರೂ ಹೇಳಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...