ಮುಂಬೈ: ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯ ಲಿವ್-ಇನ್-ರಿಲೇಶನ್ ಶಿಪ್ ಒಪ್ಪಿದ ನ್ಯಾಯಾಲಯ ಸಹಜೀವನಕ್ಕೆ ಅವಕಾಶ ನೀಡಿ ತೀರ್ಪು ಪ್ರಕಟಿಸಿದೆ.
ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಇಬ್ಬರ ಲಿವ್-ಇನ್-ರಿಲೇಶನ್ ಶಿಪ್ ಗೆ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ಅವರಿಬ್ಬರನ್ನೂ ಬೇರ್ಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದರು. ಪ್ರಕರಣ ಹೈಕೋರ್ಟ್ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಇದು ಆಕೆಯ ಜೀವನ. ತನ್ನ ಭವಿಷ್ಯದ ಬಗ್ಗೆ ಆಕೆಯೇ ನಿರ್ಧರಿಸಬೇಕು. ತನ್ನ ಬದುಕಿನ ಆಯ್ಕೆ ಬಗ್ಗೆ ಯುವತಿಗೆ ಅವಕಾಶವಿದೆ. ಹಾಗಾಗಿ ಮುಸ್ಲಿಂ ಯುವಕನೊಂದಿಗೆ ಜೊತೆಯಾಗಿ ಜೀವನ ಸಾಗಿಸಲು ಹಿಂದೂ ಯುವತಿಗೆ ಅವಕಾಶ ನೀಡಿದೆ.
ಯುವಕ-ಯುವತಿಯ ಅಂತರ್ ಧರ್ಮೀಯ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪೋಷಕರು, ಇಬ್ಬರ ಸಂಬಂಧ ಮುರಿಯಲು ನಿರ್ಧರಿಸಿದ್ದರು. ಅಲ್ಲದೇ ಯುವತಿಯನ್ನು ಬಲವಂತವಾಗಿ ಚೆಂಬೂರ್ ಸರಕಾರಿ ಮಹಿಳಾ ವಸತಿ ನಿಲಯಕ್ಕೆ ಕರೆದೊಯ್ಯಲಾಗಿತ್ತು. ಆಕೆಯನ್ನು ವಸತಿ ನಿಲಯದಿಂದ ಬಿಡುಗಡೆಗೊಳಿಸುವಂತೆ ಕೋರಿ ಯುವಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಹಾಗೂ ಮಂಜುಷಾ ದೇಶಪಾಂಡೆ, ತನ್ನ ಬದುಕನ್ನು ಆಯ್ಕೆ ಮಾಡಿಕೊಳ್ಳುವುದು ಯುವತಿಗೆ ಬಿಟ್ಟ ನಿರ್ಧಾರ. ಇದು ಆಕೆಯ ಜೀವನ. ಆಕೆ ಬಯಸಿದ್ದನ್ನು ಮಾಡಲು ಅವಕಾಶವಿದೆ. ಆಕೆಗೆ ಶುಭ ಹಾರೈಸಬಹುದೇ ಹೊರತು ಬಲವಂತವಾಗಿ ಹೀಗೆ ಮಾಡಬೇಡ ಎಂನುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಯುವತಿಗೆ ಪೋಷಕರ ಜೊತೆ ಹೋಗಲು ಸಿದ್ಧರಿಳಿದ್ದೀಯಾ ಎಂದು ಕೇಳಿದ್ದೇವೆ. ಆದರೆ ಯುವತಿ ಪೋಷಕರ ಜೊತೆ ಹೋಗಲು ನಿರಾಕಾರಿಸಿದ್ದಾಳೆ. ಆಕೆಗೆ ತನ್ನ ಯೋಗಕ್ಷೇಮದ ಬಗ್ಗೆ ತಿಳುವಳಿಕೆಯಿದ್ದರೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದೆ.