
ಹಾವೇರಿ: ಲಾಡ್ಜ್ ನಲ್ಲಿ ತಂಗಿದ್ದ ಹಿಂದೂ ಪುರುಷ, ಮುಸ್ಲಿಂ ಮಹಿಳೆ ಮೇಲೆ ಯುವಕರ ಗುಂಪು ದಾಳಿ ಮಾಡಿ ಹಿಗ್ಗಾಮುಗ್ಗಾ ಥಳಿಸಿದೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಬಳಿ ಘಟನೆ ನಡೆದಿದೆ. ಲಾಡ್ಜ್ ಒಂದರಲ್ಲಿ ಶಿರಸಿ ಮೂಲದ ಹಿಂದೂ ಪುರುಷ, ಮುಸ್ಲಿಂ ಮಹಿಳೆ ಸೋಮವಾರ ಮಧ್ಯಾಹ್ನ ರೂಂ ಪಡೆದು ತಂಗಿದ್ದರು. ಆಟೋ ಚಾಲಕನೊಬ್ಬ ಇದನ್ನು ಗಮನಿಸಿ ಯುವಕರಿಗೆ ಮಾಹಿತಿ ನೀಡಿದ್ದಾನೆ. ಅಕ್ಕಿ ಆಲೂರಿನ ನಾಲ್ಕೈದು ಮುಸ್ಲಿಂ ಯುವಕರು ಲಾಡ್ಜ್ ಕೊಠಡಿಗೆ ನುಗ್ಗಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.