ಬೆಂಗಳೂರು: ಹಿಂದೂ ಯುವಕನನ್ನು ಬಲವಂತವಾಗಿ ಮತಾಂತರ ಮಾಡಿದ ಮತ್ತು ಖತ್ನಾ ಮಾಡಿಸಿದ ಆರೋಪದ ಮೇಲೆ ಇಬ್ಬರನ್ನು ಬೆಂಗಳೂರಿನ ಬನಶಂಕರಿ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಶಬ್ಬೀರ್ ಮತ್ತು ಅತ್ತಾವರ್ ರೆಹಮಾನ್ ಬಂಧಿತ ಆರೋಪಿಗಳು. ಆರೋಪಿ ಅತ್ತಾವರ್ ಶ್ರೀಧರನನ್ನು ಮಸೀದಿಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದ್ದು, ನಾಪತ್ತೆಯಾದ ಮಸೀದಿ ಅಧ್ಯಕ್ಷ ನಯಾಜ್ ಪಾಷಾಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.