
ಬಡ ಕುಟುಂಬಕ್ಕೆ ಸೇರಿದ ಗೀತಾ ಎಂಬವರ ಪುತ್ರಿ ಕವನ ಎಂಬವರ ಮದುವೆ ಇದೇ ತಿಂಗಳ 11ನೇ ತಾರೀಖಿನಂದು ನಿಶ್ಚಯವಾಗಿತ್ತು. ಆದರೆ ಹಣ ಹೊಂದಿಸಲು ಸಾಧ್ಯವಾಗದ ಹಿನ್ನೆಲೆ ಗೀತಾ ಕುಟುಂಬಸ್ಥರು ಮದುವೆಯನ್ನ ಮುಂದೂಡಲು ನಿರ್ಧರಿಸಿದ್ದರು. ಆದರೆ ಹಿಂದೂ ಕುಟುಂಬಕ್ಕೆ ಆಸರೆಯಾದ ಎಂ.ಕೆ. ಕುಟುಂಬ ಮದುವೆ ಜವಾಬ್ದಾರಿಯನ್ನ ವಹಿಸಿಕೊಂಡಿದೆ.
ಎಂ.ಕೆ. ಹಂಝ ಎಂಬವರ ಮನೆಯಲ್ಲಿಯೇ ಮೆಹಂದಿ ಕಾರ್ಯಕ್ರಮವನ್ನ ನಡೆಸಲಾಗಿತ್ತು. ಮಾತ್ರವಲ್ಲದೇ ವಧು ಕವನಾಗೆ ಚಿನ್ನಾಭರಣ ಸೇರಿದಂತೆ ಬಟ್ಟೆ ವ್ಯವಸ್ಥೆ ಕೂಡ ಈ ಮುಸ್ಲಿಂ ಕುಟುಂಬವೇ ಮಾಡಿದೆ. ತಲಪಾಡಿಯ ದುರ್ಗಾಪರಮೇಶ್ವರಿ ದೇಗುಲದಲ್ಲಿ ನಡೆದ ಯುವತಿ ಮದುವೆಗೆ ಮಾಜಿ ಸಚಿವ ಯು.ಟಿ. ಖಾದರ್ ಕೂಡ ಸಹಾಯ ಮಾಡಿದ್ದಾರೆ. ರಂಜಿತ್ ಎಂಬವರ ಜೊತೆ ಕವನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

