ಚೆನ್ನೈ ಮೂಲದ ದಂಪತಿ ಸುಬೀನಾ ಬಾನು ಮತ್ತು ಅಬ್ದುಲ್ ಘನಿ ತಿರುಮಲ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಹೊಸದಾಗಿ ನಿರ್ಮಿಸಲಾದ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ 87 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳು ಮತ್ತು ಎಸ್‌ವಿ ಅನ್ನ ಪ್ರಸಾದ ಟ್ರಸ್ಟ್ ಗೆ ರೂ. 15 ಲಕ್ಷದ ಡಿಡಿ ನೀಡಲಾಗಿದೆ.
ತಿರುಮಲ ದೇವಸ್ಥಾನದ ರಂಗನಾಯಕುಲ ಮಂಟಪದಲ್ಲಿ ಟಿಟಿಡಿ ಇಒ ಎ.ವಿ. ಧರ್ಮಾರೆಡ್ಡಿ ಅವರಿಗೆ ಡಿಡಿ ಹಸ್ತಾಂತರಿಸಲಾಗಿದೆ.
ಶುಕ್ರವಾರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ತಿರುಮಲ ದೇವಸ್ಥಾನಕ್ಕೆ 1.5 ಕೋಟಿ ರೂ. ದೇಣಿಗೆ ನೀಡಿದ್ದರು.
ಉದ್ಯಮಿ ಅಬ್ದುಲ್ ಘನಿ ಮತ್ತು ಅವರ ಪತ್ನಿ ಸುಬೀನಾ ಬಾನು ಭಗವಾನ್ ವೆಂಕಟೇಶ್ವರನ ಭಕ್ತರಾಗಿದ್ದು, ಈ ಹಿಂದೆ 2020 ರಲ್ಲಿ ಅವರು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ದೇವಾಲಯದ ಆವರಣದಲ್ಲಿ ಸೋಂಕುನಿವಾರಕಗಳನ್ನು ಸಿಂಪಡಿಸಲು ಬಹು ಆಯಾಮದ ಟ್ರಾಕ್ಟರ್-ಮೌಂಟೆಡ್ ಸ್ಪ್ರೇಯರ್ ದೇಣಿಗೆ ನೀಡಿದರು. ಇದಕ್ಕೂ ಮುನ್ನ ದೇವಸ್ಥಾನಕ್ಕೆ ತರಕಾರಿ ಸಾಗಿಸಲು 35 ಲಕ್ಷ ರೂ. ರೆಫ್ರಿಜರೇಟರ್ ಟ್ರಕ್ ಅನ್ನು ಕೊಡುಗೆಯಾಗಿ ನೀಡಿದ್ದರು.