ನೋಡುಗರನ್ನು ಬೇಗ ಸೆಳೆಯುವಂತಹ, ಆಕರ್ಷಿತ ಮಾಡುವ ಶಕ್ತಿ ನಮ್ಮ ಸಂಪ್ರದಾಯದಲ್ಲಿ ಇದೆ. ಅನೇಕ ವಿದೇಶಿಯರು ನಮ್ಮ ಸಂಪ್ರದಾಯ ಒಪ್ಪಿ, ಇಲ್ಲಿನ ಉಡುಗೆ ತೊಡುಗೆ ರೂಢಿ ಮಾಡಿಕೊಂಡಿದ್ದಾರೆ. ಇದೀಗ ಇಂಥಹದ್ದೇ ಘಟನೆಯೊಂದು ಉತ್ತರಪ್ರದೇಶದ ಜಾನ್‍ಪುರದಲ್ಲಿ ನಡೆದಿದೆ.
ಭಾರತ ಪ್ರವಾಸಕ್ಕೆ ಬಂದಿದ್ದ ಅಮೆರಿಕದ ಮುಸ್ಲಿಂ ದಂಪತಿ ಇಲ್ಲಿನ ಸಂಪ್ರದಾಯ ಮೆಚ್ಚಿ ಮರು ಮದುವೆಯಾಗಿದ್ದಾರೆ.
ಜೌನ್‍ಪುರದ ತ್ರಿಲೋಚನ್ ಮಹಾದೇವ ದೇವಸ್ಥಾನದಲ್ಲಿ ವಿವಾಹ ನೆರವೇರಿದೆ. ಕಿಯಾಮಾ ದಿನ್ ಖಲೀಫಾ ಹಾಗೂ ಕೇಶಾ ಕಲೀಫಾ ಎಂಬ ದಂಪತಿ ಭಾರತದಲ್ಲಿ ಮರು ಮದುವೆಯಾದವರು. ವಿಶೇಷ ಅಂದರೆ ಈ ದಂಪತಿ 18 ವರ್ಷಗಳ ಹಿಂದೆ ಮುಸ್ಲಿಂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ಅಷ್ಟೆ ಅಲ್ಲ 9 ಮಕ್ಕಳಿದ್ದಾರೆ.
ಅಮೆರಿಕಾದಿಂದ ಭಾರತಕ್ಕೆ ಬಂದ ಈ ದಂಪತಿ ವಾರಣಾಸಿ ಸೇರಿದಂತೆ ಅನೇಕ ದೇವಾಲಯಗಳು ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಇಲ್ಲಿನ ದೇವಸ್ಥಾನಗಳ ಶ್ರೀಮಂತಿಕೆ, ಪದ್ದತಿಗಳು, ಹಿಂದೂ ಸಂಸ್ಕೃತಿಯಿಂದ ಆಕರ್ಷಿತರಾಗಿದ್ದರು ಎಂದು ಹೇಳಲಾಗಿದೆ. ಹೀಗಾಗಿಯೇ ಇಲ್ಲಿನ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.