ಉತ್ತರಭಾರತದಲ್ಲಿ ದಸರಾ ಸಮಯದಲ್ಲಿ ನಾಟಕ ಮಾದರಿಯಲ್ಲಿಯೇ ’ರಾಮಲೀಲಾ’ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜಿಸಲಾಗುತ್ತವೆ. ರಾಮಾಯಣದ ವಿವಿಧ ಪ್ರಸಂಗಗಳನ್ನು ಸ್ಥಳೀಯ ಪಾತ್ರಧಾರಿಗಳ ತಂಡ ಅಭಿನಯಿಸುತ್ತದೆ. ಭಕ್ತಿ-ಭಾವದಿಂದ ಜನರು ವೀಕ್ಷಿಸುತ್ತಾರೆ. ಇಂಥದ್ದೇ ರಾಮಲೀಲಾದಲ್ಲಿ ಶ್ರೀರಾಮನ ಪಾತ್ರವನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಮುಸ್ಲಿಮ್ ಸಮುದಾಯದ ದಾನಿಷ್‌ಗೆ ಸದ್ಯ ಜೀವಬೆದರಿಕೆ ಹಾಕಲಾಗಿದೆ.
ಇನ್ಮುಂದೆ ಯಾವುದೇ ಕಾರಣಕ್ಕೂ ರಾಮನ ಪಾತ್ರ ಮಾಡುವಂತಿಲ್ಲ ಎಂದು ದಾನಿಷ್‌ಗೆ ಜೀವಬೆದರಿಕೆ ಹಾಕಿರುವವರು ಆತನದ್ದೇ ಮುಸ್ಲಿಮ್ ಸಮುದಾಯದವರು. ಹೀಗೆಂದು ದಾನಿಷ್ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದಾನೆ.
BIG NEWS: ಕಲುಷಿತ ನೀರು ಸೇವನೆ; ಇಬ್ಬರ ಸಾವು, 60 ಜನರು ಅಸ್ವಸ್ಥ
ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಕಸಾಯಿ ತೊಲಾ ಆಫ್ ಬರಾದರಿ ಗ್ರಾಮದ ನಿವಾಸಿ ದಾನಿಷ್ ಸದ್ಯಕ್ಕೆ ಹತ್ಯೆಗೀಡಾಗುವ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ದಾನಿಷ್‌ಗೆ ಹತ್ಯೆಯ ಬೆದರಿಕೆ ಹಾಕಿರುವವನು ಆತನ ಬಾಡಿಗೆ ಮನೆಯ ಮಾಲೀಕನಂತೆ.
ಬಾಡಿಗೆ ಸಂಬಂಧ ಈಗಾಗಲೇ ಇಬ್ಬರ ನಡುವೆ ತಕರಾರು ಇದ್ದು, ಆ ಬಗ್ಗೆ ಘರ್ಷಣೆ ನಡೆದಾಗೆಲ್ಲ ಹಿಂದೂ ದೇವರಾದ ಶ್ರೀರಾಮನ ಪಾತ್ರ ಹಾಕುವ ಬಗ್ಗೆ ತಕರಾರು ಎತ್ತಲಾಗುತ್ತಿತ್ತು. ಈ ಬಾರಿ ನೇರವಾಗಿಯೇ ಬಾಡಿಗೆ ಮನೆ ಮಾಲೀಕ ಕೊಲ್ಲುವ ಎಚ್ಚರಿಕೆ ಕೊಟ್ಟಿದ್ದಾನೆ ಎಂದು ದಾನಿಷ್ ಪೊಲೀಸರಿಗೆ ತಿಳಿಸಿದ್ದಾರೆ.