alex Certify ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ‘ಶ್ವೇತಾ’ ಟ್ಯೂನ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ‘ಶ್ವೇತಾ’ ಟ್ಯೂನ್​..!

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಶ್ವೇತಾಳದ್ದೇ ಸುದ್ದಿ. ಆನ್​ಲೈನ್​ ಕ್ಲಾಸಿನಲ್ಲಿ ಮೈಕ್ ಆನ್​ ಇದೆ ಎಂಬ ಅರಿವಿಲ್ಲದೇ ಸ್ನೇಹಿತನ ಬಗ್ಗೆ ಮಾತನಾಡಿದ ಶ್ವೇತಾ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾಳೆ.

ಸಾಕಷ್ಟು ಟ್ರೋಲ್​ ಹಾಗೂ ಮೀಮ್ಸ್​ಗಳ ಜೊತೆಯಲ್ಲೇ ಸಂಗೀತಗಾರ ಮಯೂರ್​ ಜುಮಾನಿ, ಇನ್​ಸ್ಟಾಗ್ರಾಂನಲ್ಲಿ ಆಕೆಯ ಮಾತುಗಳನ್ನೇ ಬಳಸಿಕೊಂಡು ತಾವು ರಚಿಸಿದ ಹೊಸ ಟ್ಯೂನ್​ನ್ನು ಹರಿಬಿಟ್ಟಿದ್ದಾರೆ.

ಸಾಕಷ್ಟು ವಿನಂತಿಯ ಬಳಿಕ ನಾನು ಇದನ್ನ ಮಾಡಲೇಬೇಕಾಯ್ತು ಅಂತಾ ಈ ವಿಡಿಯೋಗೆ ಮಯೂರ್​ ಶೀರ್ಷಿಕೆಯನ್ನ ನೀಡಿದ್ದಾರೆ. ʼಶ್ವೇತಾ ಯುವರ್​ ಮೈಕ್​ ಈಸ್​ ಆನ್ʼ​ ಎಂಬ ಶಬ್ದವನ್ನೇ ಹೆಚ್ಚಾಗಿ ಬಳಸಿ ಈ ಟ್ಯೂನ್​ನ್ನು ರಚಿಸಲಾಗಿದೆ. ನೆಟ್ಟಿಗರು ಕೂಡ ಈ ಟ್ಯೂನ್​ನ್ನು ಸಖತ್​ ಎಂಜಾಯ್​ ಮಾಡಿದ್ದಾರೆ.

https://www.instagram.com/p/CLdwM-bJGxe/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...