
ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಮುರುಘಾ ಸ್ವಾಮಿ ವಿರುದ್ಧ ಸುಳ್ಳು ದೂರಿಗೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎ 2 ಮಠದ ಅಡುಗೆ ಸಹಾಯಕಿ ಬಂಧಿಸಲಾಗಿದೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಅಡುಗೆ ಸಹಾಯಕಿಯನ್ನು ಬಂಧಿಸಿದ್ದಾರೆ. ನಿನ್ನೆ ಮೈಸೂರಿನ ಒಡನಾಡಿ ಸಂಸ್ಥೆಯಿಂದ ಅವರನ್ನು ಕರೆತರಲಾಗಿತ್ತು. ಅಡುಗೆ ಸಹಾಯಕಿ ವಿಚಾರಣೆ ನಡೆಸಿದ ಪೊಲೀಸರು ನಂತರ ಬಂಧಿಸಿದ್ದಾರೆ. ಮುರುಘಾ ಶರಣರ ವಿರುದ್ಧ ಎರಡನೇ ಪೋಕ್ಸೋ ದೂರು ನೀಡಿದ್ದ ಅಡುಗೆ ಸಹಾಯಕಿ ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.