ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಬೆಳವಣಿಗೆಗಳು ನಡೆಯತೊಡಗಿವೆ. ಇವತ್ತು ಸಂಜೆಯೊಳಗೆ ಸಿಎಂ ಯಡಿಯೂರಪ್ಪ ಬದಲಾವಣೆ ಬಗ್ಗೆ ಸ್ಪಷ್ಟ ಸಂದೇಶ ಬರಲಿದೆ ಎಂದು ಹೇಳಲಾಗಿದ್ದು, ಬಿಎಸ್ವೈ ಸ್ಥಾನಕ್ಕೆ ಅನೇಕರ ಹೆಸರುಗಳು ಕೇಳಿಬಂದಿವೆ.
ಇವೆಲ್ಲದರ ನಡುವೆ ಸಚಿವ ಮುರುಗೇಶ್ ನಿರಾಣಿ ಹೆಸರು ಮುಂಚೂಣಿಯಲ್ಲಿದ್ದು, ಈಗಾಗಲೇ ಅನೇಕ ಸಲ ದೆಹಲಿಗೆ ಹೋಗಿ ಬಂದಿರುವ ಮುರುಗೇಶ್ ನಿರಾಣಿ ಇಂದು ಕೂಡ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ವರಿಷ್ಠರಿಂದ ಬುಲಾವ್ ಹಿನ್ನಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರಾಣಿ ದೆಹಲಿಗೆ ತೆರಳಿದ್ದಾರೆ.
ಬಿಜೆಪಿ ವರಿಷ್ಠರಿಂದ ಬಂದ ಸೂಚನೆ ಮೇರೆಗೆ ನಿರಾಣಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಇಂದು ಸಂಜೆಯೊಳಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ವರಿಷ್ಠರಿಂದ ಇಂದು ಸಂಜೆಗೆ ಸಂದೇಶ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.