ಚಂಡೀಗಢ: ಪತಿಯನ್ನು ಹತ್ಯೆ ಮಾಡಿದ್ದರೂ ಪತ್ನಿಗೆ ಪಿಂಚಣಿ ಸೌಲಭ್ಯ ನೀಡಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.
ಕೌಟುಂಬಿಕ ಪಿಂಚಣಿ ಸರ್ಕಾರಿ ನೌಕರರ ಕುಟುಂಬ ಕಲ್ಯಾಣ ಕಾರ್ಯಕ್ರಮವಾಗಿದೆ. ನಿವೃತ್ತ ನೌಕರ ಮೃತಪಟ್ಟ ಸಂದರ್ಭದಲ್ಲಿ ಅವರ ಪತ್ನಿಗೆ ನೀಡುವ ನೆರವಾಗಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿಯನ್ನು ಹತ್ಯೆ ಮಾಡಿದ್ದರೂ ಪತ್ನಿ ಕೌಟುಂಬಿಕ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಪತ್ನಿಯನ್ನು ಕೊಲೆಗೈದು ಶಿಕ್ಷೆಗೆ ಗುರಿಯಾಗಿದ್ದರೂ ಆಕೆಗೆ ಸಿಗಬೇಕಾದ ಕೌಟುಂಬಿಕ ಪಿಂಚಣಿ ಕಸಿದುಕೊಳ್ಳಲು ಆಗುವುದಿಲ್ಲ. ಆಕೆಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಲಾಗಿದೆ.
ಗಂಡನ ಸಾವಿಗೆ ಸಂಬಂಧವಿಲ್ಲದ ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾದ ಕಾರಣ ಸರ್ಕಾರಿ ನೌಕರನ ವಿಧವೆಗೆ ಪಿಂಚಣಿ ನಿರಾಕರಿಸಲಾಗುವುದಿಲ್ಲ ಎಂದು ಹೇಳಿದೆ. 2008 ರ ನವೆಂಬರ್‌ನಲ್ಲಿ ಸೇವೆಯ ಸಂದರ್ಭದಲ್ಲಿ ಪತಿಯ ಮರಣದ ನಂತರ ಕುಟುಂಬ ಪಿಂಚಣಿ ಮತ್ತು ಇತರ ಸ್ವೀಕಾರಾರ್ಹ ಪ್ರಯೋಜನಗಳನ್ನು ಬಿಡುಗಡೆ ಮಾಡುವಂತೆ ವಿಧವೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಎಸ್. ಸಂಧಾವಲಿಯಾ ಅವರು ಪಿಂಚಣಿ ನಿರಾಕರಿಸುವಂತಿಲ್ಲ ಎಂದು ಹೇಳಿದ್ದಾರೆ.