ಬೆಂಗಳೂರು: ಅಕ್ರಮ ಸಂಬಂಧ ಬೆಳೆಸಿದ ಮಹಿಳೆಯನ್ನು ಗಂಡನೇ ಕೊಂದು ಪೊಲೀಸರಿಗೆ ಶರಣಾದ ಘಟನೆ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭೈರಪ್ಪ ಲೇಔಟ್ ನಿವಾಸಿಯಾಗಿರುವ 31 ವರ್ಷದ ಮಹಿಳೆಯನ್ನು ಆಕೆಯ ಪ್ರತಿ ಮುಜಾಮಿಲ್ ಪಾಶ(38) ಕೊಲೆ ಮಾಡಿದ್ದಾನೆ. ಮುಜಾಮಿಲ್ ಪಾಶ ಆಟೋ ಚಾಲಕನಾಗಿದ್ದು, 12 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ಮೂವರು ಮಕ್ಕಳಿದ್ದಾರೆ.
ಪತ್ನಿ ಬೇರೆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದು, ಈ ವಿಷಯ ತಿಳಿದ ಪಾಶ ಪತ್ನಿಗೆ ಅನೇಕ ಬಾರಿ ಬುದ್ಧಿವಾದ ಹೇಳಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗುತ್ತಿತ್ತು. ಹೀಗೆ ಆರಂಭವಾದ ಜಗಳದ ವೇಳೆ ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.