
ಬೆಂಗಳೂರು: ಶುಲ್ಲಕ ವಿಚಾರಕ್ಕೆ ಜಗಳವಾಗಿ ಯುವಕನೊಬ್ಬ ದೊಡ್ಡಪ್ಪನನ್ನು ಹತ್ಯೆ ಮಾಡಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಡಿ. ಶೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
56 ವರ್ಷದ ಕೃಷ್ಣಪ್ಪ ಮೃತಪಟ್ಟವರು. ಆದಿತ್ಯ ಕೊಲೆ ಆರೋಪಿಯಾಗಿದ್ದಾನೆ. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಸೋಲು ಗೆಲುವಿನ ವಿಚಾರಕ್ಕೆ ಕೃಷ್ಣಪ್ಪ ಮತ್ತು ಗಣೇಶಪ್ಪ ಸಹೋದರರ ನಡುವೆ ಜಗಳ ಆರಂಭವಾಗಿದೆ,
ವೋಟ್ ಹಾಕಿಲ್ಲ ಎಂದು ಜಗಳ ನಡೆದಿದ್ದು, ಗಣೇಶಪ್ಪನ ಮಗ ಆದಿತ್ಯ ಕೃಷ್ಣಪ್ಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಂದಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.