ಧಾರವಾಡ: ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಓರ್ವ ಮಹಿಳೆ ಕೊಲೆ ಮಾಡಲಾಗಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕುರುವಿನಕೊಪ್ಪದಲ್ಲಿ ಘಟನೆ ನಡೆದಿದೆ.
ಜಗಳ ಬಿಡಿಸಲು ಹೋಗಿದ್ದ ಅನಸೂಯಾ(40) ಕೊಲೆಯಾದವರು. ಗಲಾಟೆಯಲ್ಲಿ ಸಚಿನ್ ಪಾಟೀಲ್, ಬಸವರಾಜ, ಮೈಲಾರಪ್ಪ ಅವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕಬ್ಬು ಕಟಾವು ವಿಚಾರಕ್ಕೆ ಗಲಾಟೆ ನಡೆದು ಮಹಿಳೆ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.