alex Certify ಪೊದೆಯಲ್ಲಿದ್ದ ಶವ ಎಳೆದ ನಾಯಿಗಳು: 33 ದಿನದ ನಂತರ ಪ್ರೇಯಸಿ ಹತ್ಯೆಯಾದ ಸ್ಥಳದಲ್ಲೇ ಪ್ರಿಯಕರನ ಮೃತದೇಹ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊದೆಯಲ್ಲಿದ್ದ ಶವ ಎಳೆದ ನಾಯಿಗಳು: 33 ದಿನದ ನಂತರ ಪ್ರೇಯಸಿ ಹತ್ಯೆಯಾದ ಸ್ಥಳದಲ್ಲೇ ಪ್ರಿಯಕರನ ಮೃತದೇಹ ಪತ್ತೆ

ರಾಯಚೂರು: ಮದುವೆಗೆ ನಿರಾಕರಿಸಿದ ಪ್ರೇಯಸಿ ಕೊಲೆ ಪ್ರಕರಣಕ್ಕೆ ನಡೆ ಸಂಬಂಧಿಸಿದಂತೆ ಹತ್ಯೆ ನಡೆದ 33 ದಿನದ ನಂತರ ಪಾಗಲ್ ಪ್ರೇಮಿಯ ಮೃತದೇಹ ಪತ್ತೆಯಾಗಿದೆ.

ಪ್ರೇಯಸಿ ಹತ್ಯೆ ನಡೆದ ಸ್ಥಳದಲ್ಲಿ ಪ್ರಿಯಕರನ ಶವ ಪತ್ತೆಯಾಗಿದೆ. ರಾಯಚೂರು ಜಿಲ್ಲೆ ಮಸ್ಕಿಯಲ್ಲಿ 15 ವರ್ಷದ ಬಾಲಕಿ ಕೊಲೆ ಮಾಡಲಾಗಿತ್ತು. ಫೆಬ್ರವರಿ 25 ರಂದು ರಮೇಶ ಎಂಬಾತ ಬಾಲಕಿ ಹತ್ಯೆ ಮಾಡಿದ್ದ. ಹತ್ಯೆಯ ಬಳಿಕ ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿ ಹತ್ಯೆಯಾದ ಎರಡರಿಂದ ಮೂರು ದಿನದಲ್ಲಿ ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.

ಬಾಲಕಿ ಕೊಲೆಯಾದ ಜಾಗದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಪೊದೆಯಲ್ಲಿ ಬಿದ್ದಿದ್ದ ಮೃತದೇಹವನ್ನು ನಾಯಿಗಳು ಎಳೆದು ತಂದಿವೆ. ಪೊದೆಯ ಬಳಿ ನಾಯಿಗಳು ಮೃತದೇಹ ಎಳೆದಾಡಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...