ಶಿವಮೊಗ್ಗ: ದೀಪಾವಳಿ ದಿನವೇ ಶಿವಮೊಗ್ಗದಲ್ಲಿ ಮಚ್ಚಿನಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗುಡ್ಡೆಕಲ್ ಫ್ಲೈ ಓವರ್ ಬಳಿ ಘಟನೆ ನಡೆದಿದೆ.
ಕೊಲೆಯಾದ ಯುವಕನನ್ನು ಮಲ್ಲೇಶ್(35) ಎಂದು ಗುರುತಿಸಲಾಗಿದೆ. ಗುಡ್ಡೇಕಲ್ ಸಿದ್ದೇಶ್ವರ ನಗರದ ವೈನ್ ಸ್ಟೋರ್ ಬಳಿ ಹತ್ಯೆ ನಡೆದಿದೆ. ಸ್ಥಳಕ್ಕೆ ಕೋಟೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.