
ಕೊಪ್ಪಳ: ನಿಧಿ ಆಸೆಗಾಗಿ ತಡರಾತ್ರಿ ಬಾಣಂತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಒಂದೂವರೆ ತಿಂಗಳ ಬಾಣಂತಿ ನೇತ್ರಾವತಿ ಕುರಿ(26) ಕೊಲೆಯಾದವರು ಎಂದು ಹೇಳಲಾಗಿದೆ.
ನಿಧಿ ಆಸೆಯಿಂದ ನೇತ್ರಾವತಿ ಅವರನ್ನು ಕೊಲೆ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಘಟನೆ ನಡೆದಿದೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ನಿಧಿಗಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಸ್ವಲ್ಪ ದೂರದಲ್ಲೇ ಬೆಂಕಿ ಹಚ್ಚಿ ನೇತ್ರಾವತಿಯನ್ನು ಕೊಲೆ ಮಾಡಲಾಗಿದೆ. ಕೊಪ್ಪಳ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.