ಮೈಸೂರು: ಸಹೋದರಿ ಪರ ನ್ಯಾಯ ಕೇಳಲು ಬಂದ ಬಾಮೈದನನ್ನು ಬಾವನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮೈಸೂರಿನ ಕುವೆಂಪು ನಗರದ ನಡೆದಿದೆ.
ಅಭಿಷೇಕ್(27) ಕೊಲೆಯಾದ ಯುವಕ. ಬಾಮೈದನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಆರೋಪಿ ಬಾವ ರವಿಕುಮಾರ್ ಪರಾರಿಯಾಗಿದ್ದಾನೆ. ಮೈಸೂರು ಕುವೆಂಪುನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಕ್ಷಿಣೆ ವಿಚಾರಕ್ಕೆ ರವಿಕುಮಾರ್ ದಂಪತಿ ನಡುವೆ ಗಲಾಟೆ ಆಗಿತ್ತು. ಅಭಿಷೇಕ್ ಸಹೋದರಿಯ ಪರ ನ್ಯಾಯ ಕೇಳಲು ಹೋದಾಗ ಘಟನೆ ನಡೆದಿದೆ ಎಂದು ಹೇಳಲಾಗಿದೆ.