ಬೆಂಗಳೂರು: ಮೊಬೈಲ್ ವಿಚಾರಕ್ಕೆ ಅತ್ತಿಗೆಯನ್ನೇ ಮೈದುನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಿಹಾರ ಮೂಲದ ಗುಡಿಯಾ ಬೇಬಿ(42) ಕೊಲೆಯಾದ ಮಹಿಳೆ. ಮೈದುನ ರಾಜೇಶ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೊಬೈಲ್ ಗಾಗಿ ಸಹೋದರಿಯರು ಜಗಳ ಮಾಡುತ್ತಿದ್ದರು. ಅಕ್ಕ ಗುಡಿಯಾ ಬೇಬಿ ಮತ್ತು ತಂಗಿ ಗೀತಾ ಕುಮಾರಿ ಅವರ ಜಗಳ ಬಿಡಿಸಲು ತಂಗಿಯ ಗಂಡ ರಾಜೇಶ್ ಕುಮಾರ್ ಬಂದಿದ್ದಾನೆ. ರಾಜೇಶ್ ಕುಮಾರ್ ನನ್ನು ಗುಡಿಯಾ ಬೇಬಿ ಹೀಯಾಳಿಸಿದ್ದಾರೆ.
ಈ ವೇಳೆ ಸಿಟ್ಟಿನಿಂದ ಅತ್ತಿಗೆ ಮೇಲೆ ದೊಣ್ಣೆಯಿಂದ ಥಳಿಸಿದ್ದಾನೆ. ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಗುಡಿಯಾ ಬೇಬಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.