ಬೆಂಗಳೂರು: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ ನೆಟ್ ಕಂಪನಿ ಮಾಲೀಕ, ಆಮ್ ಆದ್ಮಿ ಪಕ್ಷದ ಮುಖಂಡ ಅರುಣ್ ಕುಮಾರನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಏರೋನಿಕ್ಸ್ ಎಂಡಿ ಫಣೀಂದ್ರ ಮತ್ತು ಸಿಇಒ ವಿನು ಕುಮಾರ್ ಕೊಲೆಗೆ ಅರುಣ್ ಕುಮಾರ್ ಸುಪಾರಿ ನೀಡಿದ್ದ. ಜೋಕರ್ ಫೆಲಿಕ್ಸ್ ಗೆ ಸುಪಾರಿ ನೀಡಿದ್ದಾಗಿ ಅರುಣ್ ಕುಮಾರ್ ಒಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಪೊಲೀಸರ ಬಳಿ ಅರುಣ್ ಕುಮಾರ್ ಸುಪಾರಿ ನೀಡಿದ್ದ ಬಗ್ಗೆ ಬಾಯಿಬಿಟ್ಟಿದ್ದಾನೆ.
ಜಿ ನೆಟ್ ಕಂಪನಿಯಲ್ಲಿ ವಿನು ಕುಮಾರ್, ಫಣೀಂದ್ರ ಕೆಲಸ ಮಾಡುತ್ತಿದ್ದರು. ಆರೋಪಿ ಫೆಲಿಕ್ಸ್ ಕೂಡ ಇದೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಜಿ ನೆಟ್ ಕಂಪನಿ ಬಿಟ್ಟು ಫಣೀಂದ್ರ ಹೊಸ ಕಂಪನಿಯನ್ನು ಆರಂಭಿಸಿದ್ದ. ಅಮೃತ ಹಳ್ಳಿಯ ಪಂಪ ಬಡಾವಣೆಯಲ್ಲಿರುವ ಏರೋನಿಕ್ಸ್ ಕಚೇರಿಗೆ ಬಂದಿದ್ದ ಟಿಕ್ ಟಾಕ್ ಸ್ಟಾರ್ ಜೋಕರ್ ಫೆಲಿಕ್ಸ್ ಮತ್ತು ಆತನ ಸಹಚರರು ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.