
ಬೆಳಗಾವಿ: ಚಾಕುವಿನಿಂದ ಕತ್ತು ಸೀಳಿ ಬಾಮೈದನೊಬ್ಬ ಭಾವನನ್ನೇ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ವಿದ್ಯಾನಗರದಲ್ಲಿ ನಡೆದಿದೆ.
ಮನೆಯಲ್ಲೇ ನಿವೃತ್ತ ಯೋಧ ಈರಗೌಡ ಟೋಪಗೋಳ(45) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈರಗೌಡ ಪತ್ನಿಯ ಸಹೋದರ ಸಂಜಯ್ ಭಾಕರೆ ಕೃತ್ಯವೆಸಗಿದ್ದಾನೆ. ಈರಗೌಡ ಸೇನೆಯಿಂದ ನಿವೃತ್ತಿಯಾದ ನಂತರ ಕ್ರಷರ್ ನಡೆಸುತ್ತಿದ್ದರು.
ಈರಗೌಡ ಮೂಲತಃ ಜೈನಾಪುರ ಗ್ರಾಮದವರಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಸ್ಥಳಾಂತರ ಮಾಡಲಾಗಿದ್ದು, ಕುಟುಂಬದವರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.