
ಬೆಳಗಾವಿ: ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಯುವಕನನ್ನು ಹತ್ಯೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಚಿಕ್ಕನಂದಿಹಳ್ಳಿಯಲ್ಲಿ ಘಟನೆ ನಡೆದಿದೆ.
ಅಣ್ಣ ಮತ್ತು ತಂದೆಯಿಂದಲೇ ಮಂಜುನಾಥ ಉಳ್ಳಾಗಡ್ಡಿ(25) ಕೊಲೆ ಮಾಡಲಾಗಿದೆ. ಮಾರ್ಚ್ 12ರಂದು ಮಂಜುನಾಥನ ಮದುವೆ ನಿಗದಿಯಾಗಿತ್ತು. ತಮ್ಮನ ಮದುವೆಗೆ ಸೇನೆಯಲ್ಲಿದ್ದ ಅಣ್ಣ ರಜೆಯ ಮೇಲೆ ಬಂದಿದ್ದ. ನಿನ್ನೆ ರಾತ್ರಿ ಮಂಜುನಾಥ ಮದ್ಯ ಕುಡಿದು ಬಂದು ಕಿರಿಕಿರಿ ಮಾಡುತ್ತಿದ್ದ ವೇಳೆ ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥ್ ಕೊಲೆಯಲ್ಲಿ ಅಂತ್ಯವಾಗಿದೆ.
ಕಲ್ಲು, ಇಟ್ಟಿಗೆಯಿಂದ ಹೊಡೆದು ನಾಗಪ್ಪ ಮತ್ತು ಗುರುಬಸಪ್ಪ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಗೆ ಮೃತದೇಹ ಸ್ಥಳಾಂತರಿಸಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.