ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಅ. 22 ರಂದು ಘಟನೆ ನಡೆದಿದ್ದು, ಪೊಲೀಸ್ ವಿಚಾರಣೆಯಲ್ಲಿ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.
ಅ. 22 ರಂದು ಬೆಂಗಳೂರಿನ ವಾಸವಾಗಿದ್ದ ಚಂದ್ರಶೇಖರ್ ಎಂಬುವರನ್ನು ಅವರ ಮನೆಯ ಟೆರೇಸ್ ಮೇಲೆಯೇ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಲಾಗಿತ್ತು. ಚಂದ್ರಶೇಖರನ ಪತ್ನಿ ಶ್ವೇತಾ ಮತ್ತು ಆಕೆಯ ಸ್ನೇಹಿತ ಸುರೇಶ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
4 ವರ್ಷಗಳ ಹಿಂದೆ ಚಂದ್ರಶೇಖರ್, ಶ್ವೇತಾ ದಂಪತಿ ಮದುವೆಯಾಗಿದ್ದು, ಇಬ್ಬರ ನಡುವೆ 16 ವರ್ಷದ ಅಂತರವಿತ್ತು. ಮಕ್ಕಳ ಮಗಳು ಎನ್ನುವ ಕಾರಣಕ್ಕೆ ಬಲವಂತವಾಗಿ ಆಕೆಯೊಂದಿಗೆ ಮದುವೆ ಮಾಡಿಸಲಾಗಿತ್ತು. ಶ್ವೇತಾ ಹಿಂದೂಪುರದ ಸುರೇಶ್ ಜೊತೆಗೆ ಅಕ್ರಮ ಸಂಬಂಧದಲ್ಲಿದ್ದಳು. ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಗಂಡನಿಲ್ಲದ ವೇಳೆ ಸುರೇಶ್ ಮನೆಗೆ ಬಂದು ಹೋಗುತ್ತಿದ್ದ. ಗಂಡನಿದ್ದರೆ ಸಂಬಂಧ ಮುಂದುವರಿಸುವುದು ಕಷ್ಟವೆಂದು ತಿಳಿದು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಅ. 22ರಂದು ಚಂದ್ರಶೇಖರ್ ಮನೆಯ ಟೆರೇಸ್ ಮೇಲೆ ಇದ್ದಾಗ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಆತಂಭದಲ್ಲಿ ಕೊಲೆ ವಿಷಯ ಮುಚ್ಚಿಟ್ಟಿದ್ದ ಶ್ವೇತಾ ಯಲಹಂಕ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾಳೆ.