
ಬೆಂಗಳೂರು: ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ರವೀಂದ್ರನಾಥ ಗುಡ್ಡೆಯಲ್ಲಿ ನಡೆದಿದ್ದ ತಾಯಿ, ಮಗನ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನವನೀತಾ(35), ಸಾಯಿ ಸೃಜನ್(8) ಅವರನ್ನು ಹತ್ಯೆ ಮಾಡಿದ್ದ ಆರೋಪಿ ಶೇಖರ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯನ್ನು ತೊರೆದು ಮಗನೊಂದಿಗೆ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿವಾಗಿದ್ದ ನವನೀತಾಗೆ ಆರೋಪಿ ಶೇಖರ ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಇತ್ತೀಚೆಗೆ ನವನೀತಾ ಶೇಖರ್ ಬಿಟ್ಟು ಮತ್ತೊಬ್ಬನೊಂದಿಗೆ ಸಂಪರ್ಕ ಬೆಳೆಸಿದ್ದಳು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಶೇಖರ್ ಆತನ ಸಹವಾಸ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದ. ಆದರೂ, ನವನೀತಾ ಕೇಳಿರಲಿಲ್ಲ. ಸೆಪ್ಟಂಬರ್ 4ರಂದು ನವನೀತಾ ಮನೆಗೆ ಬಂದ ಶೇಖರ್ ಜಗಳವಾಡಿ ಕೊಲೆ ಮಾಡಿದ್ದಾನೆ. ಬಳಿಕ ಮಗುವಿಗೆ ಮ್ಯಾಜಿಕ್ ಹೇಳಿಕೊಡುವುದಾಗಿ ಕೈಕಾಲು ಕಟ್ಟಿ ಹಾಕಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ತನಿಖೆ ಕೈಗೊಂಡ ಪೊಲೀಸರು ಶೇಖರ್ ನನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮತ್ತು ಕುಟುಂಬದವರು ನವನೀತಾ ಪತಿ ಚಂದ್ರು ಕೊಲೆ ಮಾಡಿರುವುದಾಗಿ ಶಂಕಿಸಿದ್ದರು. ಆದರೆ, ಪೊಲೀಸರು ತನಿಖೆ ಕೈಗೊಂಡಾಗ ಕೊಲೆ ರಹಸ್ಯ ಬಯಲಾಗಿದ್ದು, ಆರೋಪಿ ಶೇಖರ್ ನನ್ನು ಬಂಧಿಸಲಾಗಿದೆ ಎನ್ನಲಾಗಿದೆ.