ಬಾಗಲಕೋಟೆ: ಜೈಲಿನಿಂದ ಬಿಡುಗಡೆಯಾಗಿ ಬಂದು ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಅ. 27 ರಂದು ವೀರೇಶ ಕರ್ನೂಲು(29) ಅವರನ್ನು ಹತ್ಯೆ ಮಾಡಲಾಗಿತ್ತು. ಇಂಗಳಗಿ ಗ್ರಾಮದ ಬಳಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದರು. ಅವಿನಾಶ್ ಸಜ್ಜನ್, ಸಂಜು ಹುಲ್ಲೂರ, ಬಸವರಾಜ ಚಿಮ್ಮಲಗಿ ಅವರನ್ನು ಬಂಧಿಸಲಾಗಿದೆ.
ಮದ್ಯಪಾನ ಮಾಡುವ ವೇಳೆ ಅವಿನಾಶ್ ತಾಯಿಯ ಬಗ್ಗೆ ಮಾತನಾಡಿದ್ದಕ್ಕೆ ಕೊಲೆ ಮಾಡಲಾಗಿದೆ. ಈ ಹಿಂದೆಯೂ ಕೊಲೆ ಪ್ರಕರಣದಲ್ಲಿ ಆರೋಪಿಗಳು ಜೈಲು ಸೇರಿದ್ದರು. ತಿಂಗಳ ಹಿಂದೆ ಅವಿನಾಶ್ ಮತ್ತು ಸಂಜು ಜೈಲಿನಿಂದ ಬಂದಿದ್ದರು. ವೀರೇಶ್ ನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದರು. ಇಳಕಲ್ ಗ್ರಾಮಾಂತರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.