ಹಿರಿಯೂರು: ವ್ಯಕ್ತಿಯನ್ನು ಹತ್ಯೆ ಮಾಡಿ 30 ಮೇಕೆಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದೇವಲಕೆರೆ ಗ್ರಾಮದಲ್ಲಿ ಘಟನೆ ನಡೆದಿತ್ತು.
ಮಚ್ಚಿನಿಂದ ಕೊಚ್ಚಿ ನರಸಿಂಹಪ್ಪ(60) ಕೊಲೆಗೈದಿದ್ದ ದುರುಳ ಮಣಿಕಂಠನನ್ನು ಬಂಧಿಸಲಾಗಿದೆ. ನರಸಿಂಹಪ್ಪನನ್ನು ಕೊಲೆ ಮಾಡಿ 30 ಮೇಕೆಗಳನ್ನು ಕಳವು ಮಾಡಿದ್ದ ಮಣಿಕಂಡ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕುರಿಸಂತೆಯಲ್ಲಿ ಲ್ಲಿ ಮೇಕೆಗಳ ಮಾರಾಟಕ್ಕೆ ಯತ್ನ ನಡೆಸಿದಾಗ ಬಂಧಿಸಲಾಗಿದೆ.