
ಚಿತ್ರದುರ್ಗ: ಪುರಸಭೆ ಸದಸ್ಯರು, ಬೆಂಬಲಿಗರು ದೊಣ್ಣೆಯಿಂದ ಬಡಿದಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪುರಸಭೆಯಲ್ಲಿ ನಡೆದಿದೆ.
ಕೆಲ ದಿನಗಳಿಂದ ನಡೆಯುತ್ತಿದ್ದ ಹೊಳಲ್ಕೆರೆ ಪುರಸಭೆ ಸದಸ್ಯರ ಗಲಾಟೆ ಇದೀಗ ತಾರಕಕ್ಕೇರಿದ್ದು, ಸಿನಿಮಾ ಸ್ಟೈಲ್ ನಲ್ಲಿ ಬಡಿಗೆಯಿಂದ ಬಡಿದಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ನೀರಿನ ಟ್ಯಾಂಕ್ ವಿಚಾರವಾಗಿ ಪುರಸಭೆ ಸದಸ್ಯ ಕೆ.ಸಿ ರಮೇಶ್ ಹಾಗೂ ಸುಧಾ ಬಸವರಾಜ್ ಬೆಂಬಲಿಗರ ನಡುವೆ ಗಲಾಟೆಯಾಗಿದ್ದು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗೃಹಮಂಡಳಿ ಲೇಔಟ್ ನಲ್ಲಿರುವ ನೀರಿನ ಟ್ಯಾಂಕ್ ನೆಲಸಮ ಮಾಡುವ ವಿಚಾರವಾಗಿ ಈ ಗಲಾಟೆ ನಡೆದಿದೆ.