ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲಾಕ್ ಮೇಲ್ ಮಾಡಿದ್ದ ಮಹಿಳೆ ರೆಹಮತ್ ಅಲಿಯಾಸ್ ಆಯಿಷಾಳನ್ನು ಪೊಲೀಸರು ಬಂಧಿಸಿದ್ದಾರೆ.
ಎ1 ಆರೋಪಿ ರೆಹಮತ್ ಅಲಿಯಾಸ್ ಆಯಿಷಾ ಹಾಗೂ ಎ5 ಆರೋಪಿ ಶೊಹೇಬ್ ಹಾಗೂ ಸಿರಾಜ್ ಎಂಬುವವರನ್ನು ಕಲ್ಲಡ್ಕ ಬಳಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಎ2 ಆರೋಪಿ ಅಬ್ದುಲ್ ಸತ್ತಾರ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಉದ್ಯಮಿ ಮುಮ್ತಾಜ್ ಅಲಿ ಅ.6ರಂದು ನಾಪತ್ತೆಯಾಗಿದ್ದರು. ಅ.7ರಂದು ಅವರ ಕಾರು ಮಂಗಳೂರಿನ ಕೂಳೂರು ಸೇತುವೆ ಬಳಿ ಡ್ಯಾಮೇಜ್ ಆಗಿದ್ದ ರೀತಿಯಲ್ಲಿ ಪತ್ತೆಯಾಗಿತ್ತು. ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಸತತ ಮೂವತ್ತು ಗಂಟೆಗಳ ಶೋಧ ಕಾರ್ಯದ ಬಳಿಕ ಫಲ್ಗುಣಿ ನದಿಯಲ್ಲಿ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿತ್ತು.
ಮಹಿಳೆಯೊಬ್ಬರ ಬ್ಲಾಕ್ ಮೇಲ್ ಕಾರಣಕ್ಕೆ ಮುಮ್ತಾಜ್ ಅಲಿ ಆತ್ಮಹತ್ಯೆಗೆ ಶರಣಾಗಿ ದ್ದಾಗಿ ಅಲಿ ಕುಟುಂಬ ಆರೋಪಿಸಿದ್ದು, ಮಹಿಳೆ ಸೇರಿದಂತೆ 6 ಜನರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಮುಮ್ತಾಜ್ ಅಲಿ ಸಹೋದರ ದೂರು ದಾಖಲಿಸಿದ್ದರು.