ಬೆಂಗಳೂರು: ಮಾಜಿ ಸಚಿವ ಪ್ರೊ. ಮಮ್ತಾಜ್ ಆಲಿಖಾನ್ ನಿಧನರಾಗಿದ್ದಾರೆ. 2008 ರಲ್ಲಿ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಮುಮ್ತಾಜ್ ಅಲಿಖಾನ್ ಅವರಿಗೆ 94 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಗಂಗಾನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಮುಮ್ತಾಜ್ ಅಲಿಖಾನ್ ನಿಧನರಾಗಿದ್ದಾರೆ.