ಕೊಪ್ಪಳ: ರಾಜ್ಯದ ಹಲವು ಜಿಲೆಗಳಲ್ಲಿ ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿದೆ. ಈ ನಡುವೆ ಕೊಪ್ಪಳ ಜಿಲ್ಲೆಯಲ್ಲಿ ಮಕ್ಕಳಲ್ಲಿ ಮಂಗನ ಬಾವು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಪುಟ್ಟ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.
ಕೊಪ್ಪಳ ಹಾಗೂ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹಲವು ಮಕ್ಕಳು ಮಂಗನ ಬಾವು ವೈರಸ್ ನಿಂದ ಬಳಲುತ್ತಿದ್ದಾರೆ. ಮಂಗನ ಬಾವು ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಮಂಗನ ಬಾವು ಕಾಣಿಸಿಕೊಂಡ ಮಕ್ಕಳಲ್ಲಿ ತೀವ್ರ ಜ್ವರ, ಮುಖದ ಕೆಳಗಿನ ಭಾಗ ಊದುವಿಕೆಯಿಂದ ಬಳಲುತ್ತಾರೆ. ಮಕ್ಕಳ ಜೊತೆ ದೊಡ್ಡವರಲ್ಲಿಯೂ ಮಂಗನ ಬಾವು ಕಾಣಿಸಿಕೊಳ್ಳುತ್ತಿದ್ದು, ಜ್ವರ ಹಾಗೂ ಇನ್ನಿತರ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಮಂಗನ ಬಾವು ಕಾಣಿಸಿಕೊಂಡವರಲ್ಲಿ ಒಂದರಿಂದ ಎರಡು ವಾರದವರೆಗೆ ಸೋಂಕು ಸಕ್ರಿಯವಾಗಿರುತ್ತದೆ. ತೀವ್ರ ಜ್ವರ, ಮುಖದ ಕೆಳಬಾಗದಲ್ಲಿ ವಿಪರೀತ ಊತ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ನಿಗದಿತ ಚಿಕಿತ್ಸೆ ಇಲ್ಲ. ಹಾಗಾಗಿ ಸ್ವಯಂ ನಿಯಂತ್ರಣದಿಂದ ಮುಂಜಾಗೃತೆ ವಹಿಸುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ.