ಮುಂಬೈನಲ್ಲಿ ಬೃಹತ್ ಮುಂಬೈ ಮುನ್ಸಿಪಾಲ್ ಕಾರ್ಪೋರೇಷನ್ ನಡೆಸಿದ ಐದನೇ ಸೆರೋ ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿಯೊಂದು ಬಯಲಾಗಿದೆ. ಈ ಸಮೀಕ್ಷೆಯಲ್ಲಿ 86 ಪ್ರತಿಶತ ಜನಸಂಖ್ಯೆಯಲ್ಲಿ ಕೋವಿಡ್ ಪ್ರತಿಕಾಯಗಳು ಇವೆ ಎಂದು ತಿಳಿದುಬಂದಿದೆ.
ಗ್ರೇಟರ್ ಮುಂಬೈ ನಗರದ ಎಲ್ಲಾ 24 ವಾರ್ಡ್ಗಳಲ್ಲಿ 18 ವರ್ಷ ಮೇಲ್ಪಟ್ಟವರ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ.
ಇದರಲ್ಲಿ 2 ಡೋಸ್ ಅಥವಾ 1 ಡೋಸ್ ಲಸಿಕೆಯನ್ನು ಸ್ವೀಕರಿಸಿದವರಲ್ಲಿ 90.26 ಪ್ರತಿಶತ ಮಂದಿ ಕೋವಿಡ್ 19 ಆಂಟಿಬಾಡಿಗಳನ್ನು ಹೊಂದಿದ್ದಾರೆ. ಹಾಗೂ ಲಸಿಕೆಯನ್ನು ಹಾಕಿಸಿಯೇಕೊಳ್ಳದವರ ಪೈಕಿ 79.86 ಪ್ರತಿಶತ ಮಂದಿ ಕೊರೊನಾ ಆಂಟಿಬಾಡಿಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.