ಮುಂಬೈ ಮಳೆ ಜಗದ್ವಿಖ್ಯಾತ. ಮಳೆಯು ಮುಂಬೈನ ಜನರ ಮೇಲೆ ಬೀರುವ ಪರಿಣಾಮದ ಬಗ್ಗೆ ದೇಶಕ್ಕೆಲ್ಲ ತಿಳಿದಿದೆ. ಹಲವು ಉದಾಹರಣೆಗಳು ಸಹ ಕಣ್ಣಮುಂದಿದೆ. ಇನ್ನೊಂದು ಸಂಗತಿ ಎಂದರೆ ಬಟ್ಟೆ ಒಣಗಿಸುವುದೇ ಜನರಿಗೆ ದೊಡ್ಡ ಸವಾಲಿನ ಕೆಲಸ.
ಆದರೆ, ಮುಂಬೈ ಜನರು ಅದಕ್ಕೂ ಒಂದು ಮಾರ್ಗವನ್ನು ರೂಪಿಸಿದ್ದಾರೆ. ಆನ್ಲೈನ್ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಸ್ಥಳಿಯ ರೈಲಿನಲ್ಲಿ ಒಂದೆರಡು ಬಟ್ಟೆಗಳನ್ನು ನೇತುಹಾಕಿ ಒಣಗಿಸುತ್ತಿರುವುದನ್ನು ಕಾಣಬಹುದಾಗಿದೆ.
ದಾದರ್ ಮುಂಬೈಕರ್ ಎಂಬ ಪೇಜ್ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಸಣ್ಣ ವಿಡಿಯೋ ಕ್ಲಿಪ್ನಲ್ಲಿ, ಒಂದು ಟವೆಲ್, ಶಾಲು ಮತ್ತು ಇನ್ನೊಂದು ಸಣ್ಣ ಬಟ್ಟೆಯನ್ನು ಲೋಕಲ್ ರೈಲಿನೊಳಗೆ ಒಣಗಿಸುತ್ತಿರುವುದನ್ನು ಕಾಣಬಹುದು. ಉಳಿದಂತೆ ಅಲ್ಲಿದ್ದ ಪ್ರಯಾಣಿಕರು ಏನೂ ಆಗಿಲ್ಲ ಎಂಬಂತೆ ಕುಳಿತುಕೊಂಡಿದ್ದರು.
ಈ ವಿಡಿಯೋ ಆನ್ಲೈನ್ನಲ್ಲಿ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ನೆಟ್ಟಿಗರನ್ನು ರಂಜಿಸಿದೆ. ಕಾಮೆಂಟ್ ಸೆಕ್ಷನ್ನಲ್ಲಿ ನಗುವಿನ ಎಮೋಜಿಗಳಿಂದ ತುಂಬಿ ಹೋಗಿತ್ತು.