alex Certify BIG NEWS: ಟಾಯ್ಲೆಟ್ ಕ್ಲೀನರ್ ಸೇವಿಸಿ ಪೊಲೀಸ್ ಠಾಣೆಯಲ್ಲೆ ಆತ್ಮಹತ್ಯೆಗೆತ್ನಿಸಿದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಟಾಯ್ಲೆಟ್ ಕ್ಲೀನರ್ ಸೇವಿಸಿ ಪೊಲೀಸ್ ಠಾಣೆಯಲ್ಲೆ ಆತ್ಮಹತ್ಯೆಗೆತ್ನಿಸಿದ ಯುವಕ

ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬರಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಪೊಲೀಸ್ ಠಾಣೆಗೆ ವಿಚಾರಣೆಗೆಂದು ಕರೆತಂದಿದ್ದ ವೇಳೆ ಆತ ಟಾಯ್ಲೆಟ್ ಕ್ಲೀನರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣ instagram ನಲ್ಲಿ ಯುವತಿಯೊಬ್ಬರ ವಿರುದ್ಧ ಅಶ್ಲೀಲ ಕಾಮೆಂಟ್ ಹಾಕಿದ್ದ ಈ ಯುವಕನನ್ನು ಮುಂಬೈನ ಪೊಲೀಸ್ ಠಾಣೆಗೆ ಮಂಗಳವಾರದಂದು ವಿಚಾರಣೆಗೆ ಕರೆತರಲಾಗಿತ್ತು. ಯುವಕ ತನ್ನ ಪೋಷಕರೊಂದಿಗೆ ಠಾಣೆಗೆ ಆಗಮಿಸಿದ್ದ.

ವಿಚಾರಣೆ ಸಂದರ್ಭದಲ್ಲಿ ಟಾಯ್ಲೆಟ್ ಗೆ ಹೋಗಲು ಅವಕಾಶ ಕೋರಿದಾಗ ಅದಕ್ಕೆ ಸಮ್ಮತಿಸಲಾಗಿತ್ತು. ಆದರೆ ಬಹಳ ಹೊತ್ತು ಕಳೆದರೂ ಆತ ಬರದ ಹಿನ್ನೆಲೆಯಲ್ಲಿ ಒಳಗೆ ಹೋಗಿ ನೋಡಿದಾಗ ಆತ ಪ್ರಜ್ಞಾಶೂನ್ಯನಾಗಿ ಮಲಗಿದ್ದು ಕಂಡುಬಂದಿತ್ತು.

ಕೂಡಲೇ ಯುವಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಇದೀಗ ಪೊಲೀಸರು, ಯುವತಿ ಕೊಟ್ಟಿದ್ದ ದೂರಿನ ಜೊತೆಗೆ ಯುವಕನ ವಿರುದ್ಧ ಆತ್ಮಹತ್ಯೆ ಯತ್ನದ ಕೇಸನ್ನೂ ಕೂಡ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...