
ಸಾಮಾಜಿಕ ಮಾಧ್ಯಮದಲ್ಲಿ ಗೋಪ್ಯ ಅಥವಾ ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಜನರಿಗೆ ಯಾವಾಗಲೂ ಎಚ್ಚರಿಕೆ ನೀಡಲಾಗುತ್ತದೆ, ಏಕೆಂದರೆ ಸಣ್ಣ ನಿರ್ಲಕ್ಷ್ಯವು ದೊಡ್ಡ ಎಡವಟ್ಟು ಆಗಬಹುದು. ಅಂಥದ್ದೇ ಒಂದು ಘಟನೆ ಈಗ ವೈರಲ್ ಆಗಿದೆ.
ಮಹಿಳೆಯೊಬ್ಬರು ರೈಲು ಟಿಕೆಟ್‌ಗಳ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರಿಂದ ಸೈಬರ್ ವಂಚಕರಿಂದ ಸುಮಾರು 64,000 ರೂ. ಕಳೆದುಕೊಂಡಿದ್ದಾರೆ. ಅವರು ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಐಆರ್‌ಸಿಟಿಸಿಯ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ತನ್ನ ಆರ್‌ಎಸಿ ಟಿಕೆಟ್ ಬಗ್ಗೆ ದೂರು ನೀಡುತ್ತಿದ್ದಾಗ ಮುಂಬೈನ ವಿಲೇ ಪಾರ್ಲೆ ನಿವಾಸಿಯೊಬ್ಬರು 64 ಸಾವಿರ ರೂ. ವಂಚಿಸಿದ್ದಾರೆ ಎಂದು ಆಕೆ ತಿಳಿಸಿದ್ದಾರೆ. ಜನವರಿ 14 ರಂದು ಭುಜ್‌ಗೆ ಪ್ರಯಾಣಿಸಲು ಮೂರು ಟಿಕೆಟ್‌ಗಳನ್ನು ಮಹಿಳೆ ಬುಕ್ ಮಾಡಿದ್ದಾರೆ.
ಎಲ್ಲಾ ಸೀಟುಗಳು ಬಹುತೇಕ ಬುಕ್ ಆಗಿದ್ದರಿಂದ, RAC (ರದ್ದತಿ ವಿರುದ್ಧ ಮೀಸಲಾತಿ) ಸೀಟುಗಳನ್ನು ಪಡೆದರು. ಇದರರ್ಥ ದೃಢಪಡಿಸಿದ ಪ್ರಯಾಣಿಕರು ರೈಲು ಹತ್ತದಿದ್ದಲ್ಲಿ, RAC ಟಿಕೆಟ್‌ನೊಂದಿಗೆ ಪ್ರಯಾಣಿಕರಿಗೆ ಪೂರ್ಣ ಬರ್ತ್ ಅನ್ನು ನಿಗದಿಪಡಿಸಲಾಗುತ್ತದೆ. ಇಲ್ಲದಿದ್ದರೆ, ಆರ್‌ಎಸಿ ಪ್ರಯಾಣಿಕರು ಆಸನವನ್ನು ಹಂಚಿಕೊಳ್ಳಬೇಕಾಗುತ್ತದೆ.
RAC ಟಿಕೆಟ್‌ಗಳು ದೃಢೀಕರಿಸಲ್ಪಡುತ್ತವೆಯೇ ಎಂದು ಪರಿಶೀಲಿಸಲು, ಈಕೆ ಟ್ವಿಟರ್‌ನಲ್ಲಿ ರೈಲು ಟಿಕೆಟ್ ವಿವರಗಳು ಮತ್ತು ಮೊಬೈಲ್ ಸಂಖ್ಯೆಯನ್ನು ಪೋಸ್ಟ್ ಮಾಡಿದ್ದರು ಮತ್ತು ಹೆಚ್ಚಿನ ಸಹಾಯಕ್ಕಾಗಿ IRCTC ಅನ್ನು ಕೇಳಿದ್ದರು. ಸ್ವಲ್ಪ ಸಮಯದ ನಂತರ ಮೀನಾ ಅವರಿಗೆ ಕರೆ ಬಂದಿತು. ಕರೆ ಮಾಡಿದವರು IRCTC ಯಿಂದ ಗ್ರಾಹಕ ಬೆಂಬಲ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡರು. ಫೋನ್‌ನಲ್ಲಿ ಲಿಂಕ್ ಕಳುಹಿಸಿ ಅದನ್ನು ಓಪನ್ ಮಾಡಿ ವಿವರಗಳನ್ನು ತುಂಬಲು ಹೇಳಿದ್ದಾರೆ.
ಇದು ಮೋಸ ಎಂದು ತಿಳಿಯದ ಮೀನಾ ಅದರಲ್ಲಿ ಇದ್ದ ವಿವರ ತುಂಬುತ್ತಿದ್ದಂತೆಯೇ ಬ್ಯಾಂಕ್ ಖಾತೆಯಿಂದ 64,011 ರೂ. ಕಳೆದುಕೊಂಡಿದ್ದಾರೆ. ಈಗ ದೂರು ದಾಖಲು ಮಾಡಲಾಗಿದೆ.