ಮುಂಬೈನಲ್ಲಿ 2020ರಲ್ಲಿ ಒಂದು ಭೀಕರ ಘಟನೆ ನಡೆದಿತ್ತು. ವಂದನಾ ಕಾಳೆ ಅನ್ನೋ ಮಹಿಳೆ ತನ್ನ ಏಳು ವರ್ಷದ ಅಕ್ಕನ ಮಗಳನ್ನ ಚಾಕ್ಲೇಟ್‌ಗೆ 10 ರೂಪಾಯಿ ಖರ್ಚು ಮಾಡಿದ್ದಕ್ಕೆ ಬಿಸಿ ಸೌಟು ಮತ್ತು ಕಬ್ಬಿಣದಿಂದ ಸುಟ್ಟಿದ್ರು. ಈಗ ಬಾಂಬೆ ಹೈಕೋರ್ಟ್ ಆಕೆಗೆ ಜಾಮೀನು ಕೊಟ್ಟಿದೆ.
ಏನಾಗಿತ್ತು ಘಟನೆ ?
ವಂದನಾ ಕಾಳೆ ತನ್ನ ಅಕ್ಕನ ಮಗಳಿಗೆ 50 ರೂಪಾಯಿ ಕೊಟ್ಟು ಚಿಕನ್ ತರಲು ಹೇಳಿದ್ರು. ಆದರೆ ಆ ಮಗು 10 ರೂಪಾಯಿ ಚಾಕ್ಲೇಟ್ ತಿಂದಿದ್ದಕ್ಕೆ ಕೋಪಗೊಂಡು, ಆ ಮಗುವಿನ ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ, ಖಾಸಗಿ ಭಾಗ ಮತ್ತು ತೊಡೆಗೆ ಬಿಸಿ ಸೌಟು ಮತ್ತು ಕಬ್ಬಿಣದಿಂದ ಸುಟ್ಟಿದ್ರು.
ಕೋರ್ಟ್ ಏನ್ ಹೇಳಿತು ?
ನ್ಯಾಯಮೂರ್ತಿ ಶಿವಕುಮಾರ್ ದೀಗೆ ಅವರು, “ವಂದನಾ ಕಾಳೆ ನಾಲ್ಕು ವರ್ಷ ಆರು ತಿಂಗಳಿಂದ ಜೈಲಿನಲ್ಲಿದ್ದಾರೆ. ಇನ್ನೂ ವಿಚಾರಣೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಅವರ ಏಳು ವರ್ಷದ ಮಗಳ ಜೊತೆ ಜೈಲಿನಲ್ಲಿದ್ದಾರೆ. ಹಾಗಾಗಿ ಅವರಿಗೆ ಜಾಮೀನು ನೀಡಬಹುದು” ಅಂತಾ ಹೇಳಿದ್ದಾರೆ.
ಸರ್ಕಾರಿ ವಕೀಲರು ಏನು ಹೇಳಿದರು ?
ಸರ್ಕಾರಿ ವಕೀಲರು, “ವಂದನಾ ಕಾಳೆ ಏಳು ವರ್ಷದ ಮಗುವಿಗೆ ಕ್ರೂರವಾಗಿ ಹಿಂಸೆ ನೀಡಿದ್ದಾರೆ. ವೈದ್ಯಕೀಯ ವರದಿಯಲ್ಲಿ ಇದು ಸಾಬೀತಾಗಿದೆ. ಅವರನ್ನು ಬಿಡುಗಡೆ ಮಾಡಿದರೆ, ಅವರು ಸಂತ್ರಸ್ತೆಗೆ ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಬಹುದು” ಅಂತಾ ವಾದಿಸಿದರು.
ಮಗುವಿನ ಕಥೆ ಏನು ?
ಮಗುವಿನ ತಾಯಿ ತೀರಿಕೊಂಡಿದ್ದರು, ತಂದೆ ಕುಡುಕನಾಗಿದ್ದ. ಹೀಗಾಗಿ ಮಗು ಅತ್ತೆಯ ಮನೆಯಲ್ಲಿ ವಾಸಿಸುತ್ತಿತ್ತು. ಮಗುವಿನ ನೆರೆಹೊರೆಯವರು ಆಕೆಗೆ ಗಂಭೀರ ಗಾಯಗಳಾಗಿವೆ ಎಂದು ಸಂಬಂಧಿಕರಿಗೆ ತಿಳಿಸಿದ ನಂತರ ಪ್ರಕರಣ ದಾಖಲಿಸಲಾಯಿತು.
ವಂದನಾ ಕಾಳೆ ಮೇಲೆ ಕೊಲೆ ಯತ್ನ, ಬೆದರಿಕೆ ಹಾಕಿದ ಆರೋಪ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ವಂದನಾ ಕಾಳೆ ದಿಂದೋಷಿ ಸೆಷನ್ಸ್ ಕೋರ್ಟ್‌ನಲ್ಲಿ ನಾಲ್ಕು ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದರು, ಆದರೆ ಕೋರ್ಟ್ ತಿರಸ್ಕರಿಸಿತ್ತು. ಮಗುವೂ ಕೂಡಾ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿ, “ಇದು ಒಂದು ತಪ್ಪು ತಿಳುವಳಿಕೆಯಿಂದ ನಡೆದ ಘಟನೆ” ಎಂದು ಹೇಳಿದೆ.