ಸಹಪಾಠಿ ಬಾಲಕನನ್ನು ತೊಡೆಯ ಮೇಲೆ ಮಲಗಿಸಿಕೊಂಡಿದ್ದ 16 ವರ್ಷದ ವಿದ್ಯಾರ್ಥಿನಿಯನ್ನು ವೇಶ್ಯೆ ಎಂದು ಕರೆದ ಆರೋಪದ ಮೇಲೆ 48 ವರ್ಷದ ಶಿಕ್ಷಕನನ್ನು ಬಂಧಿಸಿದ ಘಟನೆ ಅಂಧೇರಿಯಲ್ಲಿ ನಡೆದಿದೆ. ಶಿಕ್ಷಕನ ವಿರುದ್ಧ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಓಶಿವಾರಾ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿಯು ಅಂಧೇರಿಯಲ್ಲಿ ಖಾಸಗಿಯಾಗಿ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದನು. 8 – 10 ವಿದ್ಯಾರ್ಥಿಗಳು ಟ್ಯೂಶನ್ ಕ್ಲಾಸ್ಗೆ ಹಾಜರಾಗಿದ್ದರು.
ಈ ವೇಳೆ ಒಬ್ಬ ವಿದ್ಯಾರ್ಥಿಯು 16 ವರ್ಷದ ಬಾಲಕಿಯ ಮಡಿಲಿನಲ್ಲಿ ತಲೆ ಇಟ್ಟು ಮಲಗಿದ್ದನು. ಇದನ್ನು ನೋಡಿ ಕೋಪಗೊಂಡ ಶಿಕ್ಷಕ ಆಕೆಯನ್ನು ವೇಶ್ಯೆ ಎಂದು ಕರೆದಿದ್ದಾನೆ. ಇದಾದ ಬಳಿಕ ಮನೆಗೆ ಮರಳಿದ ಸಂತ್ರಸ್ತೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಪೋಷಕರು ಓಶಿವಾರಾ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಬಾಲಕಿ ನೀಡಿರುವ ಮಾಹಿತಿಯ ಪ್ರಕಾರ, ಬಾಲಕನು ತನ್ನ ಪೆನ್ಸಿಲ್ನ್ನು ನೆಲಕ್ಕೆ ಕೆಡವಿಕೊಂಡಿದ್ದ. ಈ ಪೆನ್ಸಿಲ್ ಎತ್ತಿಕೊಳ್ಳುವ ವೇಳೆ ಆತನ ತಲೆ ನನ್ನ ತೊಡೆಗೆ ತಾಕಿತ್ತು. ಇದನ್ನು ನೋಡಿದ ಶಿಕ್ಷಕ ನನ್ನನ್ನು ವೇಶ್ಯೆ ಎಂದು ನಿಂದಿಸಿದ್ದಾರೆ ಎಂದು ಹೇಳಿದ್ದಾಳೆ.