ಮಾರ್ಚ್ 7ರ ಹೋಳಿ ಸಂಭ್ರಮಾಚರಣೆ ದಿನ ಮುಂಬೈ ನಗರ ಸಂಚಾರ ಪೊಲೀಸರು ಹೆಲ್ಮೆಟ್ ಧರಿಸದ 10,000 ದ್ವಿಚಕ್ರ ಸವಾರರಿಗೆ ಮತ್ತು ಕುಡಿದು ವಾಹನ ಚಲಾಯಿಸಿದ 73 ವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ. 73 ವಾಹನ ಚಾಲಕರ ಪೈಕಿ 65 ಮಂದಿ ಬೈಕ್ ಸವಾರರು ಎಂದು ಅಧಿಕಾರಿ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಮದ್ಯ ಸೇವಿಸಿ ಚಾಲನೆ ಮಾಡಿದ ವಾಹನಗಳನ್ನು ಸಹ ಹಿಡಿದಿದ್ದಾರೆ. ಟ್ರಿಪಲ್ ಸೀಟ್ ಸವಾರಿ ಮಾಡಿದ 746 ದ್ವಿಚಕ್ರವಾಹನ ಬಳಕೆದಾರರಿಗೆ ಮತ್ತು ಹೆಲ್ಮೆಟ್ ರಹಿತ 10,215 ಬೈಕ್ ಸವಾರರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.