ಮುಂಬೈನ ಯುವಕ ಯೋಗೀಶ್ ಅಲೆಕಾರಿ ಮುಂಬೈನಿಂದ ಲಂಡನ್ವರೆಗೆ ಬೈಕ್ನಲ್ಲಿ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದು, ಅವರು 24 ದೇಶಗಳು ಮತ್ತು 3 ಖಂಡಗಳನ್ನು ದಾಟಿ ಪ್ರಯಾಣಿಸುವ ಗುರಿ ಹೊಂದಿದ್ದಾರೆ.
ಕಳೆದ ಆರೇಳು ವರ್ಷಗಳಿಂದ ಬೈಕ್ ರೈಡಿಂಗ್ ಮಾಡುತ್ತಿರುವ ಇವರು, ಇದುವರೆಗೆ ಭಾರತದಾದ್ಯಂತ ಸುಮಾರು ಒಂದು ಲಕ್ಷ ಕಿಲೋಮೀಟರ್ಗಳಿಗಿಂತ ಹೆಚ್ಚು ದೂರ ಬೈಕ್ ರೈಡಿಂಗ್ ಮಾಡಿದ್ದಾರೆ.
ಇದೀಗ 24 ದೇಶಗಳು ಮತ್ತು 3 ಖಂಡಗಳಲ್ಲಿ ಪ್ರಯಾಣಿಸಲು ತೀರ್ಮಾನಿಸಿದ್ದು, 25 ಸಾವಿರ ಕಿಲೋಮೀಟರ್ಗಳಷ್ಟು ದೂರ ಪ್ರಯಾಣಿಸುವುದಾಗಿ ಹೇಳಿದ್ದಾರೆ.
ಮಹಾರಾಷ್ಟ್ರ ದಿನವಾದ ಮೇ 1 ರಿಂದ ಈ ಪ್ರಯಾಣ ಆರಂಭವಾಗಲಿದ್ದು, 100 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ. 100 ದಿನಗಳ ಈ ಪ್ರವಾಸಕ್ಕೆ ತಮಗೆ ಸುಮಾರು 30 ಲಕ್ಷ ರೂಪಾಯಿ ಖರ್ಚು ಆಗಲಿದೆ ಎಂದಿರುವ ಯೋಗೀಶ್, ಬೇರೆ ಬೇರೆ ದೇಶಗಳಿಂದ ವೀಸಾ ಪಡೆಯಬೇಕಾಗಿದೆ. ಏರ್ ಕಾರ್ಗೋ ಮೂಲಕ ಬೈಕ್ ಕಳುಹಿಸಲಾಗುತ್ತದೆ ಎಂದಿದ್ದಾರೆ.