alex Certify 26/11ರ ದಾಳಿಯ ಪಾಕ್ ಮೂಲದ ಆರೋಪಿ ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿ; ಅಮೆರಿಕ ಕೋರ್ಟ್ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

26/11ರ ದಾಳಿಯ ಪಾಕ್ ಮೂಲದ ಆರೋಪಿ ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿ; ಅಮೆರಿಕ ಕೋರ್ಟ್ ತೀರ್ಪು

ವಾಷಿಂಗ್ಟನ್: 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನಿ ಮೂಲದ ಕೆನಡಾ ಉದ್ಯಮಿ ತಹವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕಾ ಕೋರ್ಟ್ ಸಮ್ಮತಿ ಸೂಚಿಸಿದೆ.

ಭಾರತ-ಯುಎಸ್ ನಡುವಿನ ಒಪ್ಪಂದವು ತಹವೂರ್ ರಾಣಾ ಹಸ್ತಾಂತರಕ್ಕೆ ಅನುಮತಿ ನೀಡುತ್ತದೆ ಎಂದು ಕೋರ್ಟ್ ತಿರ್ಪಿನಲ್ಲಿ ಪ್ರಕಟಿಸಿದೆ. ಈ ತೀರ್ಪಿನಿಂದಾಗಿ ರಾಣಾಗೆ ತೀವ್ರ ಹಿನ್ನಡೆಯಾಗಿದೆ

ರಾಣಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಅಮೆರಿಕ ನ್ಯಾಯಾಲಯ, ಆರೋಪಿ ತಹವೂರ್ ರಾಣಾ ಭಾರತಕ್ಕೆ ಹಸ್ತಾಂತರ ಭಾರತ-ಅಮೆರಿಕಾ ದೇಶಗಳ ನಡುವಿನ ಒಪ್ಪಂದದ ನಿಯಮಗಳಿಗೆ ಒಳಪಡುತ್ತದೆ. ರಾಣಾ ಅಪರಾಧ ಕೃಯಗಳಲ್ಲಿ ಭಾಗಿಯಾಗಿರುವುದಕ್ಕೆ ಭಾರತ ಸಾಕಷ್ಟು ಸಮರ್ಥ ಪುರಾವೆಗಳನ್ನು ಒದಗಿಸಿದೆ ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ತೀರ್ಪಿನ ವಿರುದ್ಧ ಮೇಲ್ಮನವಿಗೂ ರಾಣಾಗೆ ಅವಕಾಶ ನೀಡಲಾಗಿದೆ.

26/11ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ತಹಾವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯ ಈ ಹಿಂದೆಯೂ ಅನುಮೋದನೆ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ರಾಣಾ ಮತ್ತೆ ಕೋರ್ಟ್ ಮೊರೆ ಹೋಗಿದ್ದ.

ಮುಂಬೈನ ತಾಜ್ ಹೋಟೆಲ್ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ 6 ಅಮೆರಿಕನ್ನರು ಸೇರಿದಂತೆ 160 ಜನರು ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ರಾಣಾನನ್ನು ಅಮೆರಿಕಾದಲ್ಲಿ ಬಂಧಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...