ಮುಂಬೈ: ಮುಂಬೈನ ವಸಾಯಿ(ಪೂರ್ವ) ಉಪನಗರದಲ್ಲಿರುವ ಮನೆಯೊಂದರಲ್ಲಿ ಚಾರ್ಜ್ಗೆ ಹಾಕಲಾದ ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿ ಸ್ಫೋಟಗೊಂಡು ತನ್ನ ಅಜ್ಜಿಯೊಂದಿಗೆ ಮಲಗಿದ್ದ 7 ವರ್ಷದ ಬಾಲಕ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 23, ಶುಕ್ರವಾರ ಮುಂಜಾನೆ 4:30 ರಿಂದ 5 ಗಂಟೆ ನಡುವೆ ಈ ದುರಂತ ಸಂಭವಿಸಿದೆ, ಬಾಲಕ ವಸೈನ ರಾಮ್ ದಾಸ್ ನಗರ ಪ್ರದೇಶದ ತಮ್ಮ ಮನೆಯ ಹಾಲ್ನಲ್ಲಿ ಮಲಗಿದ್ದಾಗ. ಘಟನೆಯಲ್ಲಿ ಶಬ್ಬೀರ್ ಅಹ್ಮದ್ ಎಂದು ಗುರುತಿಸಲಾದ ಬಾಲಕನಿಗೆ ಶೇಕಡ 70 ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಅಜ್ಜಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಂಜೆಯ ವೇಳೆಗೆ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಮನೆಯಲ್ಲಿ ಸ್ಫೋಟದ ದೊಡ್ಡ ಶಬ್ದದಿಂದ ಮಲಗಿದ್ದ ಕುಟುಂಬವು ಎಚ್ಚರಗೊಂಡಿದೆ. ಹಿಂದಿನ ರಾತ್ರಿ ಮಲಗುವ ಮುನ್ನ ಬಾಲಕನ ತಂದೆ ಸ್ಕೂಟರ್ನ ಬ್ಯಾಟರಿಯನ್ನು ಚಾರ್ಜ್ ಮಾಡಲು ಪ್ಲಗ್ ಮಾಡಿದ್ದರು. ಅಧಿಕ ಬಿಸಿಯಾದ ಕಾರಣ ಬ್ಯಾಟರಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ನಡೆಯುತ್ತಿದೆ ಎಂದು ಮಾಣಿಕಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂಪತ್ ಪಾಟೀಲ್ ಹೇಳಿದ್ದಾರೆ.