ಪತ್ನಿಯ ಇಚ್ಛೆಯಿಲ್ಲದೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ವಿಭಿನ್ನ ತೀರ್ಪು ನೀಡಿದೆ. ಪತಿಯು, ಪತ್ನಿಯೊಂದಿಗೆ ಬಲವಂತವಾಗಿ ಸಂಬಂಧ ಬೆಳೆಸಿದ್ದು ಕಾನೂನು ಬಾಹಿರ ಕೃತ್ಯವಲ್ಲವೆಂದು ಕೋರ್ಟ್ ಹೇಳಿದೆ. ಕೆಲ ದಿನಗಳ ಹಿಂದೆ ಕೇರಳ ಹೈಕೋರ್ಟ್, ಒಂದು ಪ್ರಕರಣದ ವಿಚಾರಣೆಯ ವೇಳೆ, ವೈವಾಹಿಕ ಅತ್ಯಾಚಾರವು ಕ್ರೌರ್ಯ ಎಂದು ಹೇಳಿತ್ತು. ಆದ್ರೆ ಈಗ ಮುಂಬೈ ನ್ಯಾಯಾಲಯ ನೀಡಿರುವ ತೀರ್ಪು ಇದಕ್ಕೆ ಭಿನ್ನವಾಗಿದೆ.
ಮಹಿಳೆ ಪತಿ, ಒತ್ತಾಯಪೂರ್ವಕವಾಗಿ ಸಂಬಂಧ ಬೆಳೆಸಿದ್ದ. ಇದ್ರಿಂದ ಮಹಿಳೆಗೆ ಪಾರ್ಶ್ಚವಾಯುವಾಗಿದೆ ಎಂದು ಮಹಿಳೆ ಪರ ವಕೀಲರು ವಾದಿಸಿದ್ದರು. ಇದ್ರ ವಿಚಾರಣೆ ವೇಳೆ, ನ್ಯಾಯಾಲಯ,ಆರೋಪಿ, ಮಹಿಳೆ ಗಂಡ ಎಂದಿದೆ. ಇದು ಕಾನೂನು ಬಾಹಿರ ಕೃತ್ಯವಲ್ಲವೆಂದು ಕೋರ್ಟ್ ಹೇಳಿದೆ. ಪತಿ ವಿರುದ್ಧ ಬಲವಂತ ಲೈಂಗಿಕ ಸಂಬಂಧ ಹಾಗೂ ವರದಕ್ಷಿಣೆ ಕಿರುಕುಳದ ಆರೋಪವನ್ನು ಪತ್ನಿ ಮಾಡಿದ್ದಳು. ಪತಿ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದ.
ಇಬ್ಬರ ಮದುವೆ ನವೆಂಬರ್ 22,2020 ರಲ್ಲಿ ನಡೆದಿತ್ತು. ಅತ್ತೆ ಹಾಗೂ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡ್ತಿದ್ದಾರೆಂದು ಮಹಿಳೆ ದೂರಿದ್ದಳು. ಪತಿ ಜೊತೆ ಮಹಾಬಲೇಶ್ವರದಲ್ಲಿ ವಾಸವಾಗಿದ್ದ ಮಹಿಳೆ, ಶಾರೀರಿಕ ಸಂಬಂಧದ ನಂತ್ರ ಅನಾರೋಗ್ಯಕ್ಕೊಳಗಾಗಿದ್ದಳಂತೆ. ಪರೀಕ್ಷೆ ನಡೆಸಿದ ವೈದ್ಯರು ಆಕೆ ಪಾರ್ಶ್ವವಾಯುಗೊಳಗಾಗೊದ್ದಾಳೆಂದು ಮಾಹಿತಿ ನೀಡಿದ್ದರಂತೆ.