ಮುಂಬೈ: ಮುಂಬೈನ ಜೋಗೇಶ್ವರಿ ಪ್ರದೇಶದ ಶಾಲೆಗೆ ಬಾಂಬ್ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಜೋಗೇಶ್ವರಿ-ಓಶಿವಾರಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಶಾಲೆಗೆ ಇ-ಮೇಲ್ ಸಂದೇಶದ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಅಫ್ಜಲ್ ಗ್ಯಾಂಗ್ ನಿಂದ ಬಾಂಬ್ ಇಡಲಾಗಿದೆ ಎಂದು ಸಂದೇಶ ರವಾನಿಸಲಾಗಿದೆ.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.