ಮುಂಬೈ: ಮುಂಬೈ ರೇವ್ ಪಾರ್ಟಿ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ 8 ವ್ಯಕ್ತಿಗಳ ಬಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಮಾಹಿತಿ ನೀಡಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬಂಧಿತರಾಗಿದ್ದಾರೆ. ಆರ್ಯನ್ ಖಾನ್ ಜೊತೆಗೆ ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಎಂಬ 8 ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಎನ್‌ಸಿಬಿ ಮುಖ್ಯಸ್ಥೆ ಎಸ್‌ಎನ್ ಪ್ರಧಾ ಅವರು, ಇದು ಎರಡು ವಾರಗಳ ಕಾಲ ನಡೆದ ಕಠಿಣ ತನಿಖೆಯ ಫಲಿತಾಂಶವಾಗಿದೆ. ನಾವು ನಿರ್ದಿಷ್ಟ ಮಾಹಿತಿ, ಸಿದ್ಧತೆಯೊಂದಿಗೆ ದಾಳಿ ಮಾಡಿದ್ದೇವೆ. ಕೆಲವು ಬಾಲಿವುಡ್ ಸಂಪರ್ಕಗಳು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ಇಂದು ಮುಂಜಾನೆ, ಮುಂಬೈನಲ್ಲಿ ಕ್ರೂಸ್‌ನಲ್ಲಿ ರೇವ್ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದ 8 ಜನರನ್ನು ಎನ್‌ಸಿಬಿ ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಆರ್ಯನ್ ಸೇರಿ ವಶಕ್ಕೆ ಪಡೆದ ವ್ಯಕ್ತಿಗಳ ವೈದ್ಯಕೀಯ ವರದಿ ಬಂದ ನಂತರ ಅವರನ್ನು ಬಂಧಿಸಲು ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ. ದಾಳಿ ವೇಳೆ MDMA, ಕೊಕೇನ್, ಮೆಫೆಡ್ರೋನ್(MD) ಮತ್ತು ಚರಸ್ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಎನ್‌ಸಿಬಿ ಮುಂಬೈನ ಅಧಿಕಾರಿಗಳು ಕಾರ್ಡೆಲಿಯಾ ಕ್ರೂಸ್ ಮೇಲೆ ದಾಳಿ ನಡೆಸಿದರು, ಇದು ಮುಂಬೈನಿಂದ ಗೋವಾಕ್ಕೆ ಬಂದಿತ್ತು. ಒಟ್ಟು 2 ಮಹಿಳೆಯರು ಸೇರಿ 8 ಜನರನ್ನು ಬಂಧಿಸಲಾಗಿದೆ. ತನಿಖೆ ಮುಂದುವರೆದಿದೆ.